ಅಟಲ್ ಪಿಂಚಣಿ ಯೋಜನೆಯಲ್ಲಿ (Atal Pension Yojana APY) ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರ ಮಹತ್ವದ ಬದಲಾವಣೆ ತಂದಿದೆ.
ಆದಾಯ ತೆರಿಗೆ ಸಲ್ಲಿಸುವವರು (IT Returns) ಈ ಪಿಂಚಣಿ ಯೋಜನೆಯ ಲಾಭ ಪಡೆಯುವಂತಿಲ್ಲ. ಆದಾಯ ತೆರಿಗೆ ಸಲ್ಲಿಸುವವರನ್ನು ಈ ಪಿಂಚಣಿ ಯೋಜನೆಯ ಲಾಭ ಪಡೆಯುವುದರಿಂದ ನಿರ್ಬಂಧಿಸಲಾಗಿದೆ.
ಹೊಸ ನಿಯಮ ಅಕ್ಟೋಬರ್ 1ರಿಂದ ಅನ್ವಯ ಆಗಲಿದೆ.
ಅಟಲ್ ಪಿಂಚಣಿ ಯೋಜನೆಯಡಿ 60 ವರ್ಷದ ದಾಟಿದವರಿಗೆ ಮಾಸಿಕ 1 ಸಾವಿರದಿಂದ 5 ಸಾವಿರ ರೂಪಾಯಿವರೆಗೆ ಪಿಂಚಣಿ ನೀಡಲಾಗುತ್ತದೆ.
ಯೋಜನೆಗೆ ಸೇರ್ಪಡೆ ಆಗುವ ವಯಸ್ಸು ಮತ್ತು ಫಲಾನುಭವಿಗಳು ಪಾವತಿಸಬೇಕಿರುವ ಮೊತ್ತ ಮತ್ತು ಸಿಗುವ ಮಾಸಿಕ ಪಿಂಚಣಿ ಮೊತ್ತದ ವಿವರ ಕೆಳಗಿದೆ:
ಅಂದರೆ ಎರಡೂವರೆ ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಆದಾಯ ಇರುವವರು ಈ ಯೋಜನೆಗೆ ಅರ್ಹರಲ್ಲ.
18 ವರ್ಷದಿಂದ 40 ವರ್ಷ ವಯಸ್ಸಿನವರು ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಯೋಜನೆಗೆ ಸೇರ್ಪಡೆಯಾದ ವಯಸ್ಸು ಮತ್ತು ಫಲಾನುಭವಿಗಳು ಪಾವತಿ ಮಾಡುವ ಕಂತಿನ ಆಧಾರದಲ್ಲಿ 60 ವರ್ಷದ ಬಳಿಕ ತಿಂಗಳಿಗೆ ಲಭ್ಯ ಆಗುವ ಪಿಂಚಣಿಯ ಮೊತ್ತ ನಿರ್ಧಾರ ಆಗುತ್ತದೆ.
ADVERTISEMENT
ADVERTISEMENT