Jammu Kashmir: ಭಯೋತ್ಪಾದಕರಿಂದ ವಲಸೆ ಕಾರ್ಮಿಕನ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ (Jammu Kashmir) ಬಿಹಾರ (Bihar) ಮೂಲದ ವಲಸೆ ಕಾರ್ಮಿಕನನ್ನು ( Migrant Labourer) ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಇವತ್ತು ಬೆಳಗ್ಗೆ ಬಂಡಿಪೋರಾದ ಸೋದ್​ನರ ಸಂಬಲ್​ನಲ್ಲಿ ಉಗ್ರರು ಕೃತ್ಯ ಎಸಗಿದ್ದಾರೆ.
ಹತ್ಯೆಗೊಳಗಾದ ಬಿಹಾರ ಮೂಲದ ವಲಸೆ ಕಾರ್ಮಿಕನನ್ನು ಮೊಹಮ್ಮದ್​ ಅಮ್ರೆಜ್​ ಎಂದು ಗುರುತಿಸಲಾಗಿದೆ.
ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಟ್ವೀಟಿಸಿದ್ದಾರೆ.

LEAVE A REPLY

Please enter your comment!
Please enter your name here