ಕಾಂಗ್ರೆಸ್​ ಪರ ಅಲೆ ಇದೆ ಎಂದಿದ್ದ ಮಾಜಿ ಸಚಿವ ಎ ಮಂಜು ಜೆಡಿಎಸ್​ ಸೇರ್ಪಡೆ..?

ವಿಧಾನಸಭಾ ಚುನಾವಣೆ ಸಮೀಪಿಸ್ತಿರುವ ಹೊತ್ತಲ್ಲೇ ಹಾಸನ ಜಿಲ್ಲೆಯಲ್ಲೇ ಬಿಜೆಪಿ ನಾಯಕ ಎ ಮಂಜು ಅವರು ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ.
ಎ ಮಂಜು ಅವರು ಅಧಿಕೃತವಾಗಿ ಬಿಜೆಪಿಗೆ ವಿದಾಯ ಹೇಳಿ ಜೆಡಿಎಸ್​​ಗೆ ಸೇರ್ಪಡೆ ಆಗಲಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಭದ್ರಕೋಟೆಯಲ್ಲಿ ಪಕ್ಷಾಂತರ ಪರ್ವ ಬಿರುಸು ಪಡೆಯಲಿದೆ.
ಜೆಡಿಎಸ್​​ನಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಎ ಮಂಜು ಅವರು ಅಭ್ಯರ್ಥಿ ಆಗುವ ನಿರೀಕ್ಷೆ ಇದೆ. ಹಾಲಿ ಶಾಸಕರಾಗಿರುವ ಎ ಟಿ ರಾಮಸ್ವಾಮಿ ಅವರು ಜೆಡಿಎಸ್​​ ಬಿಟ್ಟು ಕಾಂಗ್ರೆಸ್​​ಗೆ ಹೋಗಬಹುದು ಎಂಬ ವದಂತಿಗಳ ಹಿನ್ನೆಲೆಯಲ್ಲಿ ಮಂಜು ಅವರು ಜೆಡಿಎಸ್​​ಗೆ ಹೋಗಿ ಆ ಪಕ್ಷದಿಂದ ಸ್ಪರ್ಧೆ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಮಾಜಿ ಸಚಿವ ಎ ಮಂಜು ಕರ್ನಾಟಕದಲ್ಲಿ ಕಾಂಗ್ರೆಸ್​​ ಪರವಾದ ಅಲೆ ಇದೆ ಎಂದಿದ್ದರು.
199ರಲ್ಲಿಮೊದಲ ಬಾರಿಗೆ ಶಾಸಕರಾಗಿ ಎ ಮಂಜು ಅವರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದು ಬಿಜೆಪಿ ಟಿಕೆಟ್​ನಿಂದ. ಆ ಬಳಿಕ ಕಾಂಗ್ರೆಸ್​​ಗೆ ಸೇರ್ಪಡೆಯಾದರು. 2008 ಮತ್ತು 2013ರ ಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ಗೆದ್ದು ಶಾಸಕರಾದರು. 2013ರ ಚುನಾವಣೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆಗಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಆಗಿ ಸ್ಪರ್ಧಿಸಿ ದೇವೇಗೌಡರ ವಿರುದ್ಧ ಸೋತರು.
2019ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಜ್ವಲ್​ ರೇವಣ್ಣ ವಿರುದ್ಧ ಸೋತರು.

ವಿಶೇಷ ಅಂದ್ರೆ ಎ ಮಂಜು ಅವರು ಬಿಜೆಪಿಯಲ್ಲಿರುವಾಗಲೇ ಅವರ ಪುತ್ರ ಡಾ ಮಂಥರ್​ಗೌಡ ಅವರು ಕೊಡಗು ವಿಧಾನಪರಿಷತ್ ಕ್ಷೇತ್ರದಿಂದ​ ಚುನಾವಣೆಗೆ ಸ್ಪರ್ಧಿಸಿ ಸೋತರು.

LEAVE A REPLY

Please enter your comment!
Please enter your name here