BIG BREAKING : ಚಿನ್ನದ ಬೆಲೆ 10 ಗ್ರಾಂಗೆ 60 ಸಾವಿರದತ್ತ..!

ಮದುವೆ ಸಮಾರಂಭಗಳ ನಡುವೆ ಚಿನ್ನದ ಬೆಲೆ 10 ಗ್ರಾಂಗೆ 60 ಸಾವಿರ ಗಡಿ ದಾಟುವ ನಿರೀಕ್ಷೆ ಇದೆ.

ಇವತ್ತು ಒಂದೇ ದಿನ ಚಿನ್ನದ ಬೆಲೆ 10 ಗ್ರಾಂ 1 ಸಾವಿರ 300 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಬೆಂಗಳೂರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 59, 650 ರೂಪಾಯಿಗೆ ಬಂದು ಮುಟ್ಟಿದೆ.

ಒಂದು ತಿಂಗಳ ಅಂತರದಲ್ಲೇ ಚಿನ್ನದ ಬೆಲೆ 10 ಗ್ರಾಂಗೆ 3 ಸಾವಿರ ರೂಪಾಯಿ ಹೆಚ್ಚಳ ಆಗಿರುವುದು ಆಭರಣ ಪ್ರಿಯರಿಗೆ ಆಘಾತ ನೀಡಿದೆ.

ನಿನ್ನೆಯಷ್ಟೇ ಪ್ರಧಾನಿ ಮೋದಿ ಸರ್ಕಾರ ತನ್ನ ಚಿನ್ನದ ಮೇಲಿನ ಆಮದು ಸುಂಕವನ್ನು ಶೇಕಡಾ 3ರಷ್ಟು ಅಂದರೆ ಶೇಕಡಾ 22ರಿಂದ 25ಕ್ಕೆ ಏರಿಕೆ ಮಾಡಿತ್ತು.

LEAVE A REPLY

Please enter your comment!
Please enter your name here