ಟೋಲ್ ಸಂಗ್ರಹ ಶುರು:
ಹತ್ತು ಮಾರ್ಗಗಳ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಇದೇ ತಿಂಗಳ ಫೆಬ್ರವರಿ 15ರಿಂದ ಟೋಲ್ ಸಂಗ್ರಹ ಆರಂಭವಾಗಲಿದೆ.
118 ಕಿಲೋ ಮೀಟರ್ ದೂರದ ಎಕ್ಸ್ಪ್ರೆಸ್ ವೇನಲ್ಲಿ ಮೊದಲ ಹಂತದಲ್ಲಿ ಟೋಲ್ ಸಂಗ್ರಹಕ್ಕೆ ನಿರ್ಧಾರ ಮಾಡಲಾಗಿದೆ.
ಮೊದಲ ಹಂತದಲ್ಲಿ ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತದೆ. ಬೆಂಗಳೂರಿನಿಂದ ನಿಡಘಟ್ಟಕ್ಕಿರುವ ದೂರ 56 ಕಿಲೋ ಮೀಟರ್. ಎರಡನೇ ಹಂತದಲ್ಲಿ ನಿಡಘಟ್ಟದಿಂದ ಮೈಸೂರು ಮಾರ್ಗದಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತದೆ. ಈ ಮಾರ್ಗದ ನಡುವಿನ ಅಂತರ 61 ಕಿಲೋ ಮೀಟರ್.
ಒಂದು ಟೋಲ್ ಫ್ಲಾಜಾ ಶ್ರೀರಂಗಪಟ್ಟಣ ತಾಲೂಕಿನ ಕೆ ಶೆಟ್ಟಿಹಳ್ಳಿಯ ಗನಗೂರು ಬಳಿ ಇದ್ದರೆ, ಎರಡನೇ ಟೋಲ್ ಪ್ಲಾಜಾ ಬಿಡದಿ ಸಮೀಪದ ಕುಂಬಳಗೋಡುವಿನ ಕಣಮಿನಿಕೆ ಬಳಿ ಸ್ಥಾಪಿಸಲಾಗಿದೆ.
ಎಷ್ಟಿರಬಹುದು ಟೋಲ್..?
ನಿಯಮಗಳ ಪ್ರಕಾರ 60 ಕಿಲೋ ಮೀಟರ್ ವ್ಯಾಪ್ತಿಗೆ ಒಳಗೊಂಡಂತೆ ಪ್ರತಿ ಕಿಲೋ ಮೀಟರ್ಗೆ ಒಂದೂವರೆ ರೂಪಾಯಿಯಿಂದ 2 ರೂಪಾಯಿವರೆಗೆ ಟೋಲ್ ಸಂಗ್ರಹ ಮಾಡಲಾಗುತ್ತದೆ. ಅಲ್ಲದೇ ಎಕ್ಸ್ಪ್ರೆಸ್ ವೇನಲ್ಲಿರುವ ಮಾರ್ಗಗಳ ಸಂಖ್ಯೆ, ಸೇತುವೆಗಳ ಸಂಖ್ಯೆ, ಅಂಡರ್ಪಾಸ್ಗಳ ಸಂಖ್ಯೆಯನ್ನೂ ಟೋಲ್ ಮೊತ್ತವನ್ನು ನಿರ್ಧಾರ ಮಾಡಲಾಗುತ್ತದೆ.
ಎಕ್ಸ್ಪ್ರೆಸ್ ವೇನಲ್ಲಿ 9 ದೊಡ್ಡ ಸೇತುವೆಗಳು, 42 ಸಣ್ಣ ಸೇತುವೆಗಳು, 64 ಅಂಡರ್ಪಾಸ್, 11 ಓವರ್ ಪಾಸ್, 4 ರೋಡ್ ಓವರ್ ಬ್ರಿಡ್ಜ್ ಮತ್ತು 5 ಬೈಪಾಸ್ಗಳಿವೆ.