ಯಾರಾಗಬೇಕು ಮುಂದಿನ ಪ್ರಧಾನಿ..? ಸಮೀಕ್ಷೆಯಲ್ಲಿ ಮೋದಿಗಿಂತ ರಾಹುಲ್​ ಗಾಂಧಿಯೇ ಮೊದಲ ಆಯ್ಕೆ

2024ರಲ್ಲಿ ಯಾರು ಭಾರತದ ಪ್ರಧಾನಮಂತ್ರಿ ಆಗಬೇಕೆಂದು ನೀವು ಬಯಸುತ್ತೀರಿ..?
ನರೇಂದ್ರ ಮೋದಿ, ರಾಹುಲ್​ ಗಾಂಧಿ, ನಿತೀಶ್​ ಕುಮಾರ್​, ಮಮತಾ ಬ್ಯಾನರ್ಜಿ, ಅರವಿಂದ್​ ಕೇಜ್ರಿವಾಲ್​, ಕೆ ಸಿ ಆರ್​, ಬೇರೆಯವರು, ಯಾರಾದರೂ ಆಗುತ್ತೆ..? ‘
ಇಷ್ಟು ಆಯ್ಕೆಗಳನ್ನು ಮುಂದಿಟ್ಟು ಬಿಜೆಪಿ ಪರವಾಗಿರುವ ಟಿವಿ ನ್ಯೂಸ್​ ಚಾನೆಲ್​ ಸುದರ್ಶನ ಟಿವಿಯ ಮಾಲೀಕ ಸುರೇಶ್​ ಚವ್ಹಾಣ್​ ತಮ್ಮ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಸಮೀಕ್ಷೆಯೊಂದನ್ನು ಆರಂಭಿಸಿದ್ದಾರೆ.
ಫೆಬ್ರವರಿ 4ರಂದು ಬೆಳಗ್ಗೆ 9 ಗಂಟೆ 11 ನಿಮಿಷಕ್ಕೆ ಕೈಗೊಂಡಿರುವ ಈ ಸಮೀಕ್ಷೆಯಲ್ಲಿ ಫೆಬ್ರವರಿ 10ರಂದು ಮತದಾನ ಕೊನೆಯಾಗಲಿದೆ.
ಬಲಪಂಥೀಯ ಪರವಾದ ಟಿವಿ ನ್ಯೂಸ್​ ಚಾನೆಲ್​ನ ಮಾಲೀಕ ಮತ್ತು ಮುಖ್ಯ ಸಂಪಾದಕ ಸುದರ್ಶನ್​ ಅವರು ಕೈಗೊಂಡಿರುವ ಈ ಸಮೀಕ್ಷೆಯಲ್ಲಿ ಇಲ್ಲಿವರೆಗಿನ ಟ್ವಿಟ್ಟರ್​ ಮತದಾನದಲ್ಲಿ ನರೇಂದ್ರ ಮೋದಿ ಅವರಿಗಿಂತ ರಾಹುಲ್​ ಗಾಂಧಿ ಅವರೇ 2024ರಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಮೊದಲ ಆಯ್ಕೆ ಆಗಿದ್ದಾರೆ.
ಇವತ್ತು ಬೆಳಗ್ಗೆ 10.30ರ ವೇಳೆಗೆ ಇರುವ ಮತದಾನ ಅಂಕಿಅಂಶ ಪ್ರಕಾರ 1 ಲಕ್ಷದ 64 ಸಾವಿರದ 988 ಮಂದಿ ಮತ ಚಲಾಯಿಸಿದ್ದಾರೆ.
ಇವರಲ್ಲಿ 2024ರಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಮೊದಲ ಆಯ್ಕೆ:
ನರೇಂದ್ರ ಮೋದಿ – ಶೇಕಡಾ 41.6
ರಾಹುಲ್​ ಗಾಂಧಿ – ಶೇಕಡಾ 53.5
ನಿತೀಶ್​ ಕುಮಾರ್​ – ಶೇಕಡಾ 2.4
ಮಮತಾ ಬ್ಯಾನರ್ಜಿ – ಶೇಕಡಾ 2.5

https://twitter.com/SureshChavhanke/status/1621715477449035776?s=20&t=3AehRFs1PX0os_hHqpN3wg

ಸುದರ್ಶನ್​ ಚವ್ಹಾಣ್​ ಅವರು ಉಳಿದವರ ಹೆಸರನ್ನು ಎರಡನೇ ಟ್ವೀಟ್​ನಲ್ಲಿ ಅಭಿಪ್ರಾಯ ಸಂಗ್ರಹಣೆಗೆ ಪ್ರಕಟಿಸಿದ್ದಾರೆ. ಆ ಟ್ವಿಟ್ಟರ್​ ಮತದಾನದಲ್ಲಿ 33,494 ಮಂದಿ ಮತದಾನ ಮಾಡಿದ್ದಾರೆ.
ಇವರಲ್ಲಿ 2024ರಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಮೊದಲ ಆಯ್ಕೆ
ಅರವಿಂದ್​ ಕೇಜ್ರಿವಾಲ್​ – ಶೇಕಡಾ 41
ಕೆ ಚಂದ್ರಶೇಖರ್​ರಾವ್​ – ಶೇಕಡಾ 11.2
ಬೇರೆ ಯಾರಾದರೂ – ಶೇಕಡಾ 32.6
ಯಾರಾದರೂ ಸರಿ – ಶೇಕಡಾ 15.3

ಬಿಜೆಪಿ ಪರ ಇರುವ ಟಿವಿ ನ್ಯೂಸ್​ ಚಾನೆಲ್​ನ ಮಾಲೀಕರು ಮತ್ತು ಪ್ರಧಾನ ಸಂಪಾದಕರೇ ಕೈಗೊಂಡಿರುವ ಈ ಸಮೀಕ್ಷೆಯಲ್ಲಿ ಸದ್ಯಕ್ಕಂತೂ ಮೋದಿ ಅವರಿಗಿಂತ ರಾಹುಲ್​ ಗಾಂಧಿ ಅವರೇ ಮುಂದಿರುವುದು ಅಚ್ಚರಿ.

LEAVE A REPLY

Please enter your comment!
Please enter your name here