ನಾನು ಹಿಂದುತ್ವದ ವಿರೋಧಿ, ಹಿಂದೂ ಧರ್ಮದ ವಿರೋಧಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ. ನನ್ನ ಯಾವಾಗ್ಲೂ ಹಿಂದೂ ಧರ್ಮದ ವಿರೋಧಿ, ಹಿಂದೂ ವಿರೋಧಿ.. ನಾನು ಯಾವತ್ತೂ ಹಿಂದೂ ಧರ್ಮದ ವಿರೋಧಿ ಅಲ್ಲ, ನಾನೂ ಹಿಂದೂನೇ. ನಾನು ಹಿಂದುತ್ವದ ವಿರೋಧಿ, ಮನುವಾದದ ವಿರೋಧಿ. ಮನುವಾದ, ಹಿಂದುತ್ವಕ್ಕೆ ವಿರೋಧ ಅಷ್ಟೇ. ಹಿಂದೂ ಧರ್ಮಕ್ಕೆ ವಿರೋಧ ಇಲ್ಲ. ಯಾವುದಾದರೂ ಧರ್ಮದಲ್ಲಿ ಕೊಲೆ, ಹಿಂಸೆ, ತಾರತಮ್ಯಕ್ಕೆ ಪ್ರೋತ್ಸಾಹ ಇದ್ಯಾ..? ಆದ್ರೆ ಮನುವಾದ, ಹಿಂದುತ್ವ ಇದೆಯಲ್ಲ ಕೊಲೆ, ಹಿಂಸೆ, ತಾರತಮ್ಯಕ್ಕೆ ಪ್ರೋತ್ಸಾಹ ನೀಡುತ್ತೆ
ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಆಳಂದ ಮಾಜಿ ಶಾಸಕ ಬಿ ಆರ್ ಪಾಟೀಲ್ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮಾತಾಡಿದರು.
ADVERTISEMENT
ADVERTISEMENT