ADVERTISEMENT
ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಗೌತಮ್ ಅದಾನಿ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿಯುತ್ತಿರುವ ಹೊತ್ತಲ್ಲೇ ಉತ್ತರಪ್ರದೇಶದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಅದಾನಿ ಕಂಪನಿಗೆ ಆಘಾತ ನೀಡಿದೆ.
ಉತ್ತರಪ್ರದೇಶದ ಬಿಜೆಪಿ ಸರ್ಕಾರ ಗುಜರಾತ್ ಮೂಲದ ಉದ್ಯಮಿಯ ಕಂಪನಿ ಸಲ್ಲಿಕೆ ಮಾಡಿದ್ದ 5,400 ಕೋಟಿ ರೂಪಾಯಿ ಮೊತ್ತದ ಸ್ಮಾರ್ಟ್ ಮೀಟರ್ ಪೂರೈಕೆ ಟೆಂಡರ್ನ್ನು ರದ್ದುಪಡಿಸಿದೆ.
ಅದಾನಿ ಕಂಪನಿ ಉತ್ತರಪ್ರದೇಶದ ವಿದ್ಯುತ್ ಸರಬರಾಜು ಕಂಪನಿಗಳಿಗೆ 75 ಲಕ್ಷ ಸ್ಮಾರ್ಟ್ ಮೀಟರ್ಗಳ ಪೂರೈಕೆಗೆ ಬಿಡ್ ಸಲ್ಲಿಸಿತ್ತು.
ಆದರೆ ಆ ಬಿಡ್ನ್ನು ಉತ್ತರಪ್ರದೇಶದ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿ ಮಧ್ಯಾಂಚಲ ವಿದ್ಯುತ್ ನಿಗಮ ಲಿಮಿಟೆಡ್ ರದ್ದುಗೊಳಿಸಿದೆ.
ಉತ್ತರಪ್ರದೇಶದಲ್ಲಿ ನಾಲ್ಕು ಎಸ್ಕಾಂಗಳಿವೆ. ಮಧ್ಯಾಂಚಲ, ದಕ್ಷಿಣಾಂಚಲ, ಪೂರ್ವಾಂಚಲ, ಪಶ್ಚಿಮಾಂಚಲ.
ಈ ನಾಲ್ಕು ಎಸ್ಕಾಂಗಳಿಗೆ ಪೂರೈಕೆ ಮಾಡಬೇಕಾಗಿರುವ ಸ್ಮಾರ್ಟ್ ಮೀಟರ್ಗಳ ಸಂಖ್ಯೆ 2.5 ಕೋಟಿ, ಒಟ್ಟು ಮೊತ್ತ 25 ಸಾವಿರ ಕೋಟಿ ರೂಪಾಯಿ. ಅಂದರೆ ಪ್ರತಿ ಮೀಟರ್ ಅಳವಡಿಕೆಗೆ 6 ಸಾವಿರ ರೂಪಾಯಿ ವೆಚ್ಚ ತಗುಲಿದೆ.
ಸ್ಮಾರ್ಟ್ ಮೀಟರ್ಗಳ ಪೂರೈಕೆಗೆ ದುಬಾರಿ ವೆಚ್ಚವನ್ನು ಟೆಂಡರ್ ವೇಳೆ ಸಲ್ಲಿಕೆ ಮಾಡಲಾಗಿದೆ ಎಂದು ಉತ್ತರಪ್ರದೇಶ ವಿದ್ಯುತ್ ಬಳಕೆದಾರರ ವೇದಿಕೆ ಉತ್ತರಪ್ರದೇಶ ವಿದುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ದೂರು ನೀಡಿತ್ತು.
ADVERTISEMENT