ಷೇರ್ಸ್, ಫಂಡ್ಸ್ ನಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಹೊಂದಬಹುದು ಎಂದು ತುಂಬಾ ಮಂದಿ ಸೇವಿಂಗ್ಸ್ ಅಕೌಂಟ್ಸ್ ನಲ್ಲಿ ಉಳಿತಾಯ ಮಾಡುವುದನ್ನು ನಿಲ್ಲಿಸುತ್ತಿದ್ದಾರೆ. ಆದರೆ, ಸೇವಿಂಗ್ಸ್ ಅಕೌಂಟ್ ನಿಂದಲೂ ಸಾಕಷ್ಟು ಪ್ರಯೋಜನ ಇವೆ. ಅವು ಏನು ಎಂಬುದನ್ನು ನೋಡೋಣ.
# ಉಳಿತಾಯ ಖಾತೆಯಲ್ಲಿ (Savings Account) ನೀವು ಜಮೆ (Deposits) ಮಾಡಿದ ಹಣಕ್ಕೆ ಸಂಪೂರ್ಣ ಸುರಕ್ಷತೆ ಇರುತ್ತದೆ. ಉಳಿತಾಯ ಖಾತೆಯಲ್ಲಿ ಹಣ ಇಟ್ಟು ನೀವು ನಿಶ್ಚಿಂತೆ ಆಗಿರಬಹುದು.
# ಇತರೆ ಮಾರ್ಗಗಳಿಗೆ ಹೋಲಿಸಿದಲ್ಲಿ ಉಳಿತಾಯ ಖಾತೆಯಿಂದ ಬರುವ ಲಾಭ, ಬಡ್ಡಿ (Interest rates) ಹಣ ಕಡಿಮೆ. ಆದರೆ, ಸ್ಥಿರವಾದ ಆದಾಯ ಇರುತ್ತದೆ. ಆದಾಯದ ಬಗ್ಗೆ ಆತಂಕ ಪಡಬೇಕಿರಲ್ಲ.
# ಕೈಯಲ್ಲಿ ಹಣ (Money) ಇದ್ದರೆ ಇರಲ್ಲ. ಖರ್ಚು ಆಗುತ್ತದೆ. ಆದರೆ, ಅದೇ ಹಣ ಸೇವಿಂಗ್ಸ್ ಅಕೌಂಟ್ ನಲ್ಲಿ ಉಳಿತಾಯ ಮಾಡಿದಲ್ಲಿ ನಿಮಗೆ ಅಗತ್ಯ ಬಿದ್ದಾಗ ಅದನ್ನು ಬಳಸಿಕೊಳ್ಳಬಹುದು. ಇದು ನಿಮ್ಮಲ್ಲಿ ಆರ್ಥಿಕ ಶಿಸ್ತು ಮೂಡಿಸಲು ಅಭ್ಯಾಸ ಮಾಡಿಸುತ್ತದೆ.
#ಸೇವಿಂಗ್ಸ್ ಖಾತೆಗೆ ಕೊಡುವ ಡೆಬಿಟ್ ಕಾರ್ಡ್ (Debit card ) ಬಳಸಿ ನೀವು ಸುಲಭವಾಗಿ ಏನನ್ನಾದರೂ ಖರೀದಿ (Purchase) ಮಾಡಬಹುದು.
#ಇ- ವ್ಯಾಟ್(e-valet ) ಬಳಸಿ ಹಣ ವರ್ಗಾವಣೆ ಮಾಡಬಹುದು
# ನೀವು ಪ್ರತಿ ತಿಂಗಳು ನಿಮ್ಮ ಉಳಿತಾಯ ಖಾತೆಯಲ್ಲಿ ಹಣ ಉಳಿತಾಯ ಮಾಡುತ್ತಿದ್ದರೆ, ಬ್ಯಾಂಕ್ (Bank)ಗಳಿಗೆ ನಿಮ್ಮ ಮೇಲೆ ನಂಬಿಕೆ ಮೂಡುತ್ತದೆ. ಕ್ರೆಡಿಟ್ ಕಾರ್ಡ್ಸ್(Credit cards, Loans), ಲೋನ್ ಸುಲಭವಾಗಿ ಸಿಗುತ್ತವೆ.
# ಪ್ರತಿ ತಿಂಗಳು EMI ಸೇರಿ ಅನೇಕ ಬಿಲ್ (Bill) ಗಳನ್ನು ಸೇವಿಂಗ್ಸ್ ಖಾತೆ ಮೂಲಕವೇ ಪಾವತಿ(pay) ಮಾಡಬಹುದು. ಇದಕ್ಕಾಗಿ ನೀವು ಆಟೋಮೇಟೆಡ್ ಬಿಲ್ ಸರ್ವಿಸ್ (Automated Bill Service)ಅನ್ನು ಆಕ್ಟಿವೇಟ್(Activate) ಮಾಡಿಕೊಳ್ಳಬೇಕು.
# ನಿಮ್ಮ ಆದಾಯವನ್ನು ಸೇವಿಂಗ್ಸ್ ಖಾತೆಯಲ್ಲಿ (Savings Account ) ಉಳಿತಾಯ ಮಾಡುತ್ತಿದ್ದರೆ, ಆದಾಯ ತೆರಿಗೆ ಪಾವತಿ (IT Returns) ಸಂದರ್ಭದಲ್ಲಿ ಅನುಕೂಲ ಆಗುತ್ತದೆ.
# ಪ್ರತಿ ವ್ಯಕ್ತಿ ಎರಡು ಸೇವಿಂಗ್ಸ್ ಅಕೌಂಟ್ ಓಪನ್ ಮಾಡಬೇಕು. ಅದರಲ್ಲಿ ಒಂದನ್ನು ದೈನಂದಿನ, ಮತ್ತೊಂದು ಖಾತೆಯನ್ನು ತುರ್ತು ಸಂದರ್ಭದಲ್ಲಿ ಬಳಸಿದಲ್ಲಿ ಆರ್ಥಿಕ ನಿರ್ವಹಣೆ ಸುಲಭ ಆಗಲಿದೆ.