ಶಿವಮೊಗ್ಗ: ಬೈಕ್​ನಲ್ಲಿ ಒಬ್ಬರೇ ಓಡಾಡಬಹುದು, ಇಬ್ಬರಲ್ಲ..!

ಶಿವಮೊಗ್ಗದಲ್ಲಿ (Shivamogga) ಎರಡು ಗುಂಪುಗಳ ನಡುವೆ ಗಲಾಟೆ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಒಬ್ಬರಷ್ಟೇ ಸಂಚಸರಿಸಬಹುದು ಎಂದು ಪೊಲೀಸರು ಹೊಸ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ದ್ವಿಚಕ್ರ ವಾಹನದಲ್ಲಿ (Two Wheelers) ಮೂರು ದಿನ ಇಬ್ಬರು ಸಂಚರಿಸಲು ಅಂದರೆ ಹಿಂಬದಿ ಸವಾರರು ಸಂಚರಿಸಲು ಅವಕಾಶ ಇಲ್ಲ ಎಂದು ಶಿವಮೊಗ್ಗದಲ್ಲಿ ತಡರಾತ್ರಿ ಸುದ್ದಿಗೋಷ್ಠಿ ನಡೆಸಿದ ಎಡಿಜಿಪಿ ಅಲೋಕ್​ ಕುಮಾರ್ (ADGP Alok Kumar)​ ಅವರು ಹೇಳಿದ್ದಾರೆ.

ನಿಯಮಗಳ ಪ್ರಕಾರ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರನ್ನು ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಕರೆದುಕೊಂಡು ಹೋಗುವಂತಿಲ್ಲ.

ಮಹಿಳೆಯರು, ಮಕ್ಕಳು ಮತ್ತು 40 ವರ್ಷ ಮೇಲ್ಪಟ್ಟ ಪುರುಷರನ್ನು ಕರೆದುಕೊಂಡು ಹೋಗಲು ಯಾವುದೇ ನಿರ್ಬಂಧ ಇರಲ್ಲ.

ಅಲ್ಲದೇ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವೆರೆಗೆ ದ್ವಿಚಕ್ರ ವಾಹನಗಳ ಓಡಾಟವನ್ನು ನಿಲ್ಲಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಗಲಾಟೆ ಆದಾಗ ಬೈಕ್​ನಲ್ಲಿ ಪುರುಷ ಹಿಂಬದಿ ಸವಾರರು ಇರಬಾರದು ಎಂಬ ನಿಯಮವನ್ನು ಅಲೋಕ್​ ಕುಮಾರ್​ ಜಾರಿಗೆ ತಂದಿದ್ದರು.

LEAVE A REPLY

Please enter your comment!
Please enter your name here