ADVERTISEMENT
ಸ್ವಾತಂತ್ರ್ಯದ ಅಮೃತ ಮಹೋತ್ಸವದಂದೇ ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದೆ.
ಸಾಲದ ಮೇಲಿನ ಬಡ್ಡಿ ದರವನ್ನು (Lending Rates) ಶೇಕಡಾ 0.5ರಷ್ಟು ಹೆಚ್ಚಳ ಮಾಡಿದೆ.
ಇವತ್ತಿನಿಂದಲೇ ಹೊಸ ಬಡ್ಡಿದರ ಅನ್ವಯ ಆಗಲಿದೆ.
ಇತ್ತೀಚೆಗೆ ಆರ್ಬಿಐ (RBI) ರೆಪೋ ದರ (Repo Rate) ಹೆಚ್ಚಳ ಮಾಡಿದ್ದರ ಹಿನ್ನೆಲೆ ಸಾಲದ ಮೇಲಿನ ಬಡ್ಡಿ ಹೆಚ್ಚಳ ಆಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಹೆಚ್ಡಿಎಫ್ಸಿ (HDFC) ಕೂಡಾ ಸಾಲದ ಮೇಲಿನ ಬಡ್ಡಿ ಹೆಚ್ಚಳ ಮಾಡಿತ್ತು.
ADVERTISEMENT