ಬೆಂಗಳೂರಿನ ಯಶವಂತಪುರದಿಂದ ಹೊರಟ್ಟಿದ್ದ ರೈಲಿಗೆ ಎಕ್ಸ್​ಪ್ರೆಸ್​ ರೈಲು ಡಿಕ್ಕಿ – 50 ಪ್ರಯಾಣಿಕರು ಸಾವು

ಒಡಿಶಾ ರಾಜ್ಯದ ಬಾಲಸೋರ್​ ಜಿಲ್ಲೆಯಲ್ಲಿ ಸಂಭವಿಸಿರುವ ಭೀಕರ ರೈಲು ದುರಂತದಲ್ಲಿ 50 ಮಂದಿ ಮೃತಪಟ್ಟಿದ್ದಾರೆ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಿಂದ ಹೊರಟ್ಟಿದ್ದ SMVT BENGALURU to Kolkata Howrah ಎಕ್ಸ್​ಪ್ರೆಸ್​ ರೈಲು (12864) ಮತ್ತು ಶಾಲಿಮಾರ್​-ಚೆನ್ನೈ ನಡುವಿನ ಕೋರಮಂಡಲ ಎಕ್ಸ್​ಪ್ರೆಸ್​ ರೈಲಿನ ನಡುವೆ ಡಿಕ್ಕಿ ಸಂಭವಿಸಿದೆ.

ಮೂರು ರೈಲುಗಳ ನಡುವೆ ಅಪಘಾತ:
ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಪ್ರಕಾರ  ಎರಡು ಎಕ್ಸ್​ಪ್ರೆಸ್​ ರೈಲು ಮತ್ತು ಒಂದು ಗೂಡ್ಸ್​ ರೈಲು ನಡುವೆ ಅಪಘಾತ ಸಂಭವಿಸಿದೆ.
ಎರಡು ಎಕ್ಸ್​ಪ್ರೆಸ್​ ರೈಲು ಮತ್ತು ಗೂಡ್ಸ್​ ರೈಲು ಒಟ್ಟು ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ 600ಕ್ಕೂ ಅಧಿಕ ರೈಲು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅವರೇ ರಾಜ್ಯದ ವಿಪತ್ತು ನಿರ್ವಹಣಾ ಕೇಂದ್ರದ ಮುಖ್ಯ ಕಚೇರಿಗೆ ದೌಡಾಯಿಸಿದ್ದು, ಪರಿಹಾರ ಕಾರ್ಯಾಚರಣೆಯ ಮೇಲೆ ನೇರ ನಿಗಾ ವಹಿಸಿದ್ದಾರೆ.
ಐವತ್ತಕ್ಕೂ ಅಧಿಕ ಅಂಬ್ಯುಲೆನ್ಸ್​ಗಳು ಮತ್ತು ಬಸ್​ಗಳನ್ನು ರವಾನಿಸಲಾಗಿದೆ.
ಆಗಿದ್ದೇನು..?
ಉತ್ತರಪ್ರದೇಶದ ಶಾಲಿಮಾರ್​ನಿಂದ ಚೆನ್ನೈಗೆ ಬರುತ್ತಿದ್ದ ಕೋರಮಂಡಲ ಎಕ್ಸ್​ಪ್ರೆಸ್​ ರೈಲು ಬಾಲೇಸ್ವರ್​ನಲ್ಲಿ ಹಳಿ ತಪ್ಪಿ ಪಕ್ಕದ ಹಳಿಗೆ ಬಿತ್ತು. 10-12 ಬೋಗಿಗಳು ಪಕ್ಕದ ಹಳಿಗೆ ಬಿದ್ದವು.
ಇದಾದ ಕೆಲ ಹೊತ್ತಿನ ಬಳಿಕ ಯಶವಂತಪುರ-ಹೌರಾ ನಡುವಿನ ನಡುವಿನ ರೈಲು ಹಳಿ ತಪ್ಪಿ ಬಿದ್ದಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದು ಯಶವಂತಪುರ-ಹೌರಾ ನಡುವಿನ ರೈಲಿನ ಮೂರ್ನಾಲ್ಕು ಬೋಗಿಗಳು ಕೂಡಾ ಹಳಿ ತಪ್ಪಿದ್ವು.