ಬೆಂಗಳೂರಿನಿಂದ ಹೊರಟ್ಟಿದ್ದ ರೈಲು ಡಿಕ್ಕಿ – 50 ಮಂದಿ ಸಾವು – ಸಹಾಯವಾಣಿ ಬಿಡುಗಡೆ

ಒಡಿಶಾ ರಾಜ್ಯದ ಬಾಲಸೋರ್​ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 50 ಮಂದಿ ಸಾವನ್ನಪ್ಪಿದ್ದು, 179 ಮಂದಿ ಗಾಯಗೊಂಡಿದ್ದಾರೆ.
ಹಳಿ ತಪ್ಪಿ ಪಕ್ಕದ ಹಳಿಗೆ ಬಿದ್ದಿದ್ದ ಶಾಲಿಮಾರ್​-ಚೆನ್ನೈ ಎಕ್ಸ್​ಪ್ರೆಸ್​ ರೈಲಿನ 10-12 ಬೋಗಿಗಳಿಗೆ ಬೆಂಗಳೂರಿನಿಂದ ಹೌರಾಕ್ಕೆ (12864) ಹೊರಟ್ಟಿದ್ದ ರೈಲು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಅಪಘಾತ ಇನ್ನಷ್ಟು ಭೀಕರವಾಗಿದೆ.
ಮೂರು ರೈಲುಗಳ ನಡುವೆ ಅಪಘಾತ: ಎರಡು ಎಕ್ಸ್​ಪ್ರೆಸ್​ ರೈಲು ಮತ್ತು ಗೂಡ್ಸ್​ ರೈಲು ಒಟ್ಟು ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿದೆ.
ರೈಲ್ವೆ ಇಲಾಖೆ ಹೊರಡಿಸಿರುವ ಸಹಾಯವಾಣಿ ಸಂಖ್ಯೆಗಳು:
ಬೆಂಗಳೂರು: 080-22356409
ಬಂಗಾರಪೇಟೆ: 08153 255253
ಕುಪ್ಪಂ: 8431403419
ಸರ್​ ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್​ : 09606005129
 ಕೃಷ್ಣರಾಜಪುರಂ +91 88612 03980