ಅಕ್ರಮ ಗಣಿ ಗುತ್ತಿಗೆ ನೀಡಿದ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಗಣಿ ಹಗರಣದ ಬಗ್ಗೆ ತನಿಖೆಗೆ ಸಂಬAಧಿಸಿದ ಪ್ರಮುಖ ಸಾಕ್ಷ್ಯಗಳನ್ನೇ ಒಳಗೊಂಡ ಅತ್ಯಂತ ರಹಸ್ಯ ಕಡತಗಳನ್ನು ಅಕ್ರಮವಾಗಿ ಪಡೆದುಕೊಂಡಿರುವ, ಆ ಮೂಲಕ ತನಿಖೆಯನ್ನೇ ಹಾದಿ ತಪ್ಪಿಸುವ ಕುತಂತ್ರ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಸಂಜಯನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಗಣಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಡಿಜಿಪಿ ಎಂ ಚಂದ್ರಶೇಖರ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ದೂರಿನಲ್ಲಿ ಏನಿದೆ..?
ಅಕ್ರಮವಾಗಿ ಗಣಿ ಗುತ್ತಿಗೆ (ಸಾಯಿ ಕೃಷ್ಣ ಮಿನಿರಲ್ಸ್ಗೆ ಗುತ್ತಿಗೆ) ನೀಡಿದ್ದ ಪ್ರಕರಣದಲ್ಲಿ ಆರೋಪಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಬಲವಾದ ಸಾಕ್ಷö್ಯಗಳಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದ ನವೆಂಬರ್ 23ರಂದು ಕುಮಾರಸ್ವಾಮಿ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಲೋಕಾಯುಕ್ತ ಎಸ್ಐಟಿ ರಾಜ್ಯಪಾಲರಿಗೆ ಪತ್ರವನ್ನು ಬರೆದಿತ್ತು. ಕೆಲವು ಸ್ಪಷ್ಟನೆಗಳನ್ನು ಕೇಳಿ ಜುಲೈ 29ರಂದು ರಾಜ್ಯಪಾಲರು ಎಸ್ಐಟಿಗೆ ಪತ್ರವನ್ನು ಬರೆದಿದ್ದರು. ರಾಜ್ಯಪಾಲರ ಈ ಪತ್ರ ಎಸ್ಐಟಿಗೆ ತಲುಪಿದ್ದು 11 ದಿನಗಳ ಬಳಿಕ ಅಂದರೆ ಆಗಸ್ಟ್ 8ರಂದು. ರಾಜ್ಯಪಾಲರು ಕೇಳಿದ್ದ ಆ ಸ್ಪಷ್ಟನೆಗಳಿಗೆ ಆಗಸ್ಟ್ 19ರಂದು ದಾಖಲೆಗಳ ಸಮೇತ ಉತ್ತರಿಸಲಾಗಿತ್ತು. ಅದಾದ ಬಳಿಕ ದಾಖಲೆಗಳನ್ನು ಕನ್ನಡದಿಂದ ಇಂಗ್ಲೀಷ್ಗೆ ಭಾಷಾಂತರ ಮಾಡುವಂತೆ ಆಗಸ್ಟ್ 29ರಂದು ರಾಜ್ಯಪಾಲರು ಮತ್ತೆ ಲೋಕಾಯುಕ್ತಕ್ಕೆ ವಾಪಸ್ ಕಳುಹಿಸಿದ್ದರು.
ಈ ನಡುವೆ ಆಗಸ್ಟ್ 21ರಂದು ಸುದ್ದಿಸಂಸ್ಥೆ ಎಎನ್ಐಗೆ ಆರೋಪಿ ಆಗಿರುವ ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದರು. ರಾಜ್ಯಪಾಲರು ಗಂಭೀರ ಅದ್ಯಯನವನ್ನು ನಡೆಸಿದ ಬಳಿಕ ಕಡತದಲ್ಲಿನ ಸಹಿಗೆ ಸಂಬAಧಿಸಿದAತೆ ವಿವಾದ ಇದ್ದು ಮತ್ತೊಮ್ಮೆ ಕಡತವನ್ನು ಪರಿಶೀಲನೆ ಮಾಡುವಂತೆ ಲೋಕಾಯುಕ್ತ ಎಸ್ಐಟಿಗೆ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದರು. ತನ್ನ ವಿರುದ್ಧವೇ ನಡೆಯುತ್ತಿರುವ ತನಿಖೆಯಲ್ಲಿ ರಾಜ್ಯಪಾಲರು ನೀಡಿರುವ ಈ ನಿರ್ದಿಷ್ಟ ಸೂಚನೆ ಆ ಹಗರಣದಲ್ಲಿ ಆರೋಪಿಯಾಗಿರುವ ಹೆಚ್ ಡಿ ಕುಮಾರಸ್ವಾಮಿಗೆ ಹೇಗೆ ಗೊತ್ತಾಯ್ತು..?
ಜುಲೈ 29ರಂದು ರಾಜ್ಯಪಾಲರು ಸ್ಪಷ್ಟನೆ ಕೋರಿ ಬರೆದಿದ್ದ ಪತ್ರ ಬೆಂಗಳೂರಲ್ಲೇ ಕಚೇರಿ ಹೊಂದಿರುವ ಎಸ್ಐಟಿಗೆ ತಲುಪಲು 11 ದಿನ ಬೇಕಾಯಿತು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಆಗಸ್ಟ್ 21ರಂದು ಅರೋಪಿ ಕುಮಾರಸ್ವಾಮಿ ನಡೆಸಿರುವ ತಾನು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಸಾಯಿ ಕೃಷ್ಣ ಮಿನಿರಲ್ಸ್ಗೆ ಸಂಬAಧಿಸಿದ ದಾಖಲೆಗಳನ್ನು ಪ್ರದರ್ಶನ ಮಾಡಿದ್ದಾರೆ. ವಿಶೇಷ ತನಿಖಾ ತಂಡ ಸಂಗ್ರಹ ಮಾಡಿರುವ ಈ ಸಾಕ್ಷ್ಯಗಳು ಪ್ರಕರಣದಲ್ಲಿ ಆರೋಪಿಯಾಗಿರುವ ಕುಮಾರಸ್ವಾಮಿಗೆ ಹೇಗೆ ಸಿಕ್ಕಿತು..?
ಗಣಿ ಹಗರಣದಲ್ಲಿ ಆರೋಪಿಯಾಗಿರುವ ಹೆಚ್ ಡಿ ಕುಮಾರಸ್ವಾಮಿ ರಾಜ್ಯಪಾಲರು ಮತ್ತು ಎಸ್ಐಟಿ ಜೊತೆಗಿನ ಪತ್ರ ವ್ಯವಹಾರದ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿ ಆ ಮೂಲಕ ತನ್ನ ವಿರುದ್ಧದ ತನಿಖೆಯ ಹಾದಿಯನ್ನೇ ತಪ್ಪಿಸುವ ಪ್ರಯತ್ನ ಮಾಡ್ತಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಆರೋಪಿ ಹೆಚ್ ಡಿ ಕುಮಾರಸ್ವಾಮಿ ತನಿಖೆಯಲ್ಲಿ ಮಾಡುತ್ತಿರುವ ಈ ಹಸ್ತಕ್ಷೇಪ ತನಿಖಾಧಿಕಾರಿಗಳಿಗೆ ಮತ್ತು ಪ್ರಕರಣದಲ್ಲಿ ಸಾಕ್ಷಿದಾರರಿಗೆ ಹಾಕಲಾಗುತ್ತಿರುವ ಬೆದರಿಕೆ. ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗಿರುವ ಆರೋಪಿ ಹೆಚ್ ಡಿ ಕುಮಾರಸ್ವಾಮಿ ಬಹಿರಂಗವಾಗಿ ಸುಳ್ಳು ಆರೋಪಗಳನ್ನು ಮಾಡ್ಕೊಂಡು ತಿರುಗಾಡ್ತಿದ್ದು ಮತ್ತು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯವನ್ನು ಕಾನೂನುಬಾಹಿರವಾಗಿ ಸಂಗ್ರಹಿಸುತ್ತಿದ್ದಾರೆ. ಇದರಿಂದ ತನಿಖೆಯ ಪಾವಿತ್ರö್ಯತೆಗೆ ಧಕ್ಕೆ ಉಂಟು ಮಾಡಲಿದೆ. ಆರೋಪಿ ಹೆಚ್ ಡಿ ಕುಮಾರಸ್ವಾಮಿ ಈ ಮೂಲಕ ಸಾಕ್ಷö್ಯ ನಾಶ ಮಾಡುತ್ತಿದ್ದು, ಕೇಂದ್ರ ಸಚಿವರಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ತನಿಖೆಯ ಅಗತ್ಯವಿದೆ
ಎಂದು ಎಡಿಜಿಪಿ ಎಂ ಚಂದ್ರಶೇಖರ್ ಅವರು ದೂರು ನೀಡಿದ್ದಾರೆ.
ಸಂಜಯನಗರ ಪೊಲೀಸರು ಬಿಎನ್ಎಸ್ಎಸ್ 174(1)ರ ಅಡಿಯಲ್ಲಿ ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಮಾತ್ರವಲ್ಲದೇ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ವಿರುದ್ಧವೂ ದೂರು ನೀಡಲಾಗಿದೆ.
ADVERTISEMENT
ADVERTISEMENT