ಬೆಂಗಳೂರಿನಿಂದ ಹೊರಟ್ಟಿದ್ದ ರೈಲಿಗೆ Express​ ರೈಲು ಡಿಕ್ಕಿ – 300 ಮಂದಿ ಪ್ರಯಾಣಿಕರಿಗೆ ಗಾಯ

ಶಾಲಿಮಾರ್​ – ಚೆನ್ನೈ ಕೋರಮಂಡಲ ಎಕ್ಸ್​ಪ್ರೆಸ್​​ ರೈಲು (12841) ಹಳಿ ತಪ್ಪಿದ್ದು ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದಿದೆ. ಒಡಿಶಾ ರಾಜ್ಯದ ಬಾಲಸೋರ್​ ಜಿಲ್ಲೆಯ ಬಹನಗಾ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ 300 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಎಕ್ಸ್​ಪ್ರೆಸ್​ ರೈಲಿನ 17 ಬೋಗಿಗಳು ಹಳಿ ತಪ್ಪಿವೆ.
ಎಕ್ಸ್​ಪ್ರೆಸ್​ ರೈಲು ಕೋಲ್ಕತ್ತಾದಿಂದ ಚೆನ್ನೈಗೆ ಹೋಗ್ತಿತ್ತು ಮತ್ತು ಗೂಡ್ಸ್​ ರೈಲು ಬೆಂಗಳೂರಿನಿಂದ ಕೋಲ್ಕತ್ತಾಕ್ಕೆ ಹೊರಟ್ಟಿತ್ತು.

ಸಂಜೆ 7.20ರ ವೇಳೆ ಡಿಕ್ಕಿ ಸಂಭವಿಸಿದೆ.
ರಾಷ್ಟ್ರೀಯ ವಿಪತ್ತು ಪರಿಹಾರದ ನಾಲ್ಕು ತಂಡಗಳನ್ನು ಮತ್ತು 60 ಅಂಬ್ಯುಲೆನ್ಸ್​ಗಳನ್ನೂ ಅಪಘಾತ ಸ್ಥಳಕ್ಕೆ ರವಾನೆ ಮಾಡಲಾಗಿದೆ.

ಐದು ಅಗ್ನಿಶಾಮಕದಳ ತಂಡಗಳು ಮತ್ತು ವೈದ್ಯರ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ.