ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವ ಪ್ರದೇಶಗಳಿಗೆ ಇಂದೂ ಸಹ ಲೋಕಸಭೆ ವಿಪಕ್ಷನಾಯಕ ರಾಹುಲ್ ಗಾಂಧಿ ಭೇಟಿ ನೀಡಿದರು. ಇದೊಂದು ಭಯಾನಕ ದುರಂತ ವಾಗಿದ್ದು, ಸಂತ್ರಸ್ತರ ಕಾಳಜಿ ವಹಿಸುವ ಕುರಿತಾಗಿ ಜಿಲ್ಲಾಡಳಿತದ ಜೊತೆ ಚರ್ಚಿಸಿದ್ದೇನೆ ಎಂದರು.
ಇನ್ನು ಇಲ್ಲಿನ ದೃಶ್ಯಗಳು, ನಾನು ನನ್ನ ತಂದೆಯನ್ನು ಕಳೆದುಕೊಂಡಾಗ ನನಗೆ ಆಗಿದ್ದ ನೋವನ್ನು ಮತ್ತೆ ಮರುಕಳಿಸುವಂತೆ ಮಾಡತು. ಇಲ್ಲಿನ ಜನ ಕೇವಲ ತಂದೆಯನ್ನು ಮಾತ್ರ ಕಳೆದುಕೊಂಡಿಲ್ಲ, ಇಡೀ ಕುಟುಂಬವನ್ನೇ ಕಳೆದುಕೊಂಡು ಅತ್ಯಂತ ನೋವಿನಲ್ಲಿದ್ದಾರೆ. ಅವರೆಲ್ಲರ ನೋವಿನಲ್ಲಿ ನಾನು ಭಾಗಿದಾರನಾಗಿದ್ದೇನೆ.
ಹಿಂದೆಂದೂ ಕಂಡೂ ಕೇಳರಿಯದ ಘಟನೆಗೆ ಕೇರಳ ಸಾಕ್ಷಿಯಾಗಿದ್ದು, ಈ ಕುರಿತಾಗಿ ತಾವು ಸಂಸತ್ ನಲ್ಲಿ ಧನಿಎತ್ತುವುದಾಗಿ ತಿಳಿಸಿದರು. ಅಲ್ಲದೆ ಕೇರಳಾ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಸಂತ್ರಸ್ತರಿಗೆ ಸೂಕ್ತ ಭದ್ರತೆ ಮತ್ತು ಸೂರು ಕಲ್ಪಿಸೋ ಕುರಿತಾಗಿ ಚರ್ಚಿಸುತ್ತೇನೆ ಎಂದರು. ಜೊತೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸೂರು ಕಳೆದುಕೊಂಡಿರುವ ಸಂತ್ರಸ್ತರಿಗೆ ನೂರಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಿ ಕೊಡೋದಾಗಿಯೂ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸದ್ಯಕ್ಕೆ ಸಂತ್ರಸ್ತರ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳ ಮೇಲೆ ಕೇಂದ್ರೀಕೃತವಾಗಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸಿಲು ತುರ್ತು ಸಮಗ್ರ ಕ್ರಿಯಾ ಯೋಜನೆಗೂ ಕೂಡ ರಾಹುಲ್ ಗಾಂಧಿ ಇದೇ ವೇಳೆ ಒತ್ತಾಯಿಸಿದ್ದರು.