ADVERTISEMENT
ಕರ್ನಾಟಕ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ಗೆ ಆಘಾತ. ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿದ್ದ ತನ್ವೀರ್ ಸೇಠ್ ಅವರು ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ.
ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ತನ್ವೀರ್ ಸೇಠ್ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.
ತಮ್ಮ ಚುನಾವಣಾ ನಿವೃತ್ತಿ ಸಂಬಂಧ ಎಐಸಿಸಿ (ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್)ಗೆ ಪತ್ರ ಬರೆದಿದ್ದಾರೆ.
ತಮ್ಮ ಮೇಲಾದ ದಾಳಿಯ ಬಳಿಕ ನನ್ನ ಆರೋಗ್ಯ ಹದಗೆಟ್ಟಿದೆ. ಅನಾರೋಗ್ಯದ ಕಾರಣ ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.
ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮ ಚುನಾವಣಾ ನಿವೃತ್ತಿಯ ಬಗ್ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
2019ರ ನವೆಂಬರ್ನಲ್ಲಿ ಪಿಎಫ್ಐ ಕಾರ್ಯಕರ್ತ ತನ್ವೀರ್ ಸೇಠ್ ಅವರ ಕತ್ತಿಗೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ.
ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದೆ ಎಂದು ತನ್ವೀರ್ ಸೇಠ್ ಅವರು ಹೇಳಿದ್ದಾರೆ.
ತನ್ವೀರ್ ಸೇಠ್ ಅವರ ತಂದೆ ಅಜೀಜ್ ಸೇಠ್ ಅವರು ಕೂಡಾ ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದರು.
ಐದು ಬಾರಿ ನರಸಿಂಹರಾಜ ಕ್ಷೇತ್ರದಿಂದ ಗೆದ್ದಿದ್ದ ತನ್ವೀರ್ ಸೇಠ್ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದರು.
ತನ್ವೀರ್ ಸೇಠ್ ಅವರ ದಿಢೀರ್ ಚುನಾವಣಾ ನಿವೃತ್ತಿ ನರಸಿಂಹರಾಜ ಕ್ಷೇತ್ರದಲ್ಲಿ ಎಸ್ಡಿಪಿಎಐಗೆ ಲಾಭ ಮಾಡಿಕೊಡುತ್ತಾ..? ಈಗಾಗಲೇ ಅಬ್ದುಲ್ ಮಜೀದ್ ಅವರನ್ನು ಎಸ್ಡಿಪಿಐ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಅತೀ ಹೆಚ್ಚು ಮುಸಲಾನ್ಮ ಮತದಾರರು ಇರುವ ವಿಧಾನಸಭಾ ಕ್ಷೇತ್ರಗಳಲ್ಲಿ ನರಸಿಂಹರಾಜ ಕ್ಷೇತ್ರವೂ ಒಂದು.
ಶೇಕಡಾ 48.3ರಷ್ಟು ಮತದಾರರು ಮುಸಲ್ಮಾನ ಮತದಾರರು. 2018ರ ಚುನಾವಣಾ ಅಂಕಿಅಂಶದ ಪ್ರಕಾರ ಕ್ಷೇತ್ರದಲ್ಲಿ 1 ಲಕ್ಷದ 26 ಸಾವಿರ ಮುಸಲ್ಮಾನ ಮತದಾರರಿದ್ದಾರೆ. 45 ಸಾವಿರಕ್ಕೂ ಅಧಿಕ ದಲಿತ ಮತದಾರರಿದ್ದಾರೆ.
ಎಸ್ಡಿಪಿಐ ಕಣ್ಣಿಟ್ಟಿರುವ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ನರಸಿಂಹರಾಜವೂ ಒಂದು.
2018ರ ಫಲಿತಾಂಶ:
ತನ್ವೀರ್ ಸೇಠ್ – ಕಾಂಗ್ರೆಸ್ – 62,268
ಸಂದೇಶ ಸ್ವಾಮಿ – ಬಿಜೆಪಿ – 44,141 (ಸಂದೇಶ್ ಸ್ವಾಮಿ ಅವರು ಮೈಸೂರು ಪಾಲಿಕೆ ಮಾಜಿ ಮೇಯರ್ ಮತ್ತು ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿರುವ ಸಂದೇಶ್ ನಾಗರಾಜ್ ಅವರ ಸಹೋದರ)
ಅಬ್ದುಲ್ ಮಜೀದ್ – ಎಸ್ಡಿಪಿಐ – 33,284
2013ರ ಫಲಿತಾಂಶ:
ತನ್ವೀರ್ ಸೇಠ್ – ಕಾಂಗ್ರೆಸ್ – 38037
ಅಬ್ದುಲ್ ಮಜೀದ್ – ಎಸ್ಡಿಪಿಐ – 29,667
ಸಂದೇಶ ಸ್ವಾಮಿ – ಜೆಡಿಎಸ್ – 29,180
(ಸಂದೇಶ್ ಸ್ವಾಮಿ ಅವರು ಮೈಸೂರು ಪಾಲಿಕೆ ಮಾಜಿ ಮೇಯರ್ ಮತ್ತು ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿರುವ ಸಂದೇಶ್ ನಾಗರಾಜ್ ಅವರ ಸಹೋದರ)
2008ರ ಫಲಿತಾಂಶ:
ತನ್ವೀರ್ ಸೇಠ್ – ಕಾಂಗ್ರೆಸ್ -37,789
ಸಂದೇಶ್ ನಾಗರಾಜ್ – ಜೆಡಿಎಸ್ – 31,104
ಬಿ ಪಿ ಮಂಜುನಾಥ್ – ಬಿಜೆಪಿ – 17,545
ADVERTISEMENT