ವಿಧಾನಸಭಾ ಚುನಾವಣೆ – ಮೈಸೂರು ಜಿಲ್ಲೆ: ಆಂತರಿಕ ಸಮೀಕ್ಷೆಯ ಲೆಕ್ಕಾಚಾರ ಏನು..?

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಆಂತರಿಕ ಸಮೀಕ್ಷೆ ಕೈಗೊಂಡಿದೆ.

ಕಾಂಗ್ರೆಸ್​ ನಡೆಸಿರುವ ಆಂತರಿಕ ಸಮೀಕ್ಷೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ಸಿದೆ.

ಎರಡು ಚುನಾವಣೆಯಲ್ಲಿ ಬದಲಾವಣೆ:

2013ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಜೆಡಿಎಸ್​ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಒಂದೂ ಕ್ಷೇತ್ರವನ್ನೂ ಗೆದ್ದಿರಲಿಲ್ಲ.

ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಕೇವಲ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಬಿಜೆಪಿ 3 ವಿಧಾನಸಭಾ ಕ್ಷೇತ್ರಗಳಲ್ಲಿ, ಜೆಡಿಎಸ್​ 5 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿತ್ತು.

ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳು:

ಪಿರಿಯಾಪಟ್ಟಣ

ಕೃಷ್ಣರಾಜನಗರ ( ಕೆ ಆರ್​ ನಗರ)

ಹುಣಸೂರು

ಹೆಗ್ಗಡದೇವನಕೋಟೆ (ಹೆಚ್​ ಡಿ ಕೋಟೆ)

ನಂಜನಗೂಡು

ಚಾಮುಂಡೇಶ್ವರಿ

ಕೃಷ್ಣರಾಜ (ಕೆ ಆರ್​ ಕ್ಷೇತ್ರ)

ಚಾಮರಾಜ

ನರಸಿಂಹರಾಜ

ವರುಣ

ಟಿ ನರಸೀಪುರ

2018ರ ಫಲಿತಾಂಶ:

ಕಳೆದ ಬಾರಿ ಚುನಾವಣೆಯಲ್ಲಿ ಕೆ ಆರ್​ ಕ್ಷೇತ್ರ, ಚಾಮರಾಜ, ನಂಜನಗೂಡು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.

ಚಾಮುಂಡೇಶ್ವರಿ, ಹುಣಸೂರು, ಟಿ ನರಸೀಪುರ, ಕೆ ಆರ್​ ನಗರ, ಪಿರಿಯಾಪಟ್ಟಣದಲ್ಲಿ ಜೆಡಿಎಸ್​ ಗೆದ್ದಿತ್ತು.

ವರುಣ, ಹೆಚ್​ ಡಿ ಕೋಟೆ, ನರಸಿಂಹರಾಜದಲ್ಲಿ ಕಾಂಗ್ರೆಸ್​ ಗೆದ್ದಿತ್ತು.

ಕಾಂಗ್ರೆಸ್​ ಆಂತರಿಕ ಸಮೀಕ್ಷೆ:

ಕಾಂಗ್ರೆಸ್​ ಆಂತರಿಕ ಸಮೀಕ್ಷೆಯ ಪ್ರಕಾರ 11 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು ಖಚಿತ ಎನ್ನಲಾಗಿದೆ.

ಅಂದರೆ ಕಾಂಗ್ರೆಸ್​ಗೆ ಬರೋಬ್ಬರೀ 6 ಸೀಟು ಹೆಚ್ಚಳ ಆಗಬಹುದು ಎಂದು ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

ಸದ್ಯದ ಸ್ಥಿತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ 1 ಕ್ಷೇತ್ರದಲ್ಲಷ್ಟೇ ಬಿಜೆಪಿ ಗೆಲುವು ಸಾಧ್ಯತೆ ಇದೆ. ಅಂದರೆ ಬಿಜೆಪಿಗೆ 2 ಕ್ಷೇತ್ರ ನಷ್ಟ ಆಗುವ ನಿರೀಕ್ಷೆ ಇದೆ.

ಕಳೆದ ಬಾರಿ 5 ಕ್ಷೇತ್ರಗಳನ್ನು ಗೆದ್ದಿದ್ದ ಜೆಡಿಎಸ್​ ಈ ಬಾರಿ ಕೇವಲ 1 ಕ್ಷೇತ್ರವನ್ನಷ್ಟೇ ಗೆಲ್ಲಬಹುದು ಎನ್ನುವುದು ಜೆಡಿಎಸ್​ ಅಂದಾಜು. ಜೆಡಿಎಸ್ ಬರೋಬ್ಬರೀ 4 ಕ್ಷೇತ್ರ ಕಳೆದುಕೊಳ್ಳಬಹುದು ಎಂದು ಕಾಂಗ್ರೆಸ್​ ಆಂತರಿಕ ಸಮೀಕ್ಷೆ ಅಂದಾಜಿಸಿದೆ.

LEAVE A REPLY

Please enter your comment!
Please enter your name here