ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್​ಗೆ ಆಘಾತ

ಹಾಸನ ಟಿಕೆಟ್​ ಹಂಚಿಕೆ ಕಗ್ಗಂಟಿನ ನಡುವೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್​​ಗೆ ಬಹುದೊಡ್ಡ ಆಘಾತ. ಕೆ ಆರ್​ ಪೇಟೆ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್​ ಟಿಕೆಟ್​ ವಂಚಿತರಾಗಿರುವ ಬಿ ಎಲ್​ ದೇವರಾಜು ಅವರು ಕಾಂಗ್ರೆಸ್​ಗೆ ಸೇರ್ಪಡೆ ಆಗಲಿದ್ದಾರೆ.

ನಾಳೆ ಬಂಡಿಹೊಳೆ ದೇವರಾಜು ಅವರು ತಮ್ಮ ಬೆಂಬಲಿಗರು ಮತ್ತು ಆಪ್ತರ ತುರ್ತು ಸಭೆಯನ್ನು ಕರೆದಿದ್ದಾರೆ.

2019ರ ಉಪ ಚುನಾವಣೆಯಲ್ಲಿ ದೇವರಾಜು ಅವರು ಜೆಡಿಎಸ್​ ಅಭ್ಯರ್ಥಿಯಾಗಿ ಸೋತಿದ್ದರು. ಸಚಿವ ಕೆ ಸಿ ನಾರಾಯಣಗೌಡ ಅವರ ಎದುರು 9 ಸಾವಿರ ಮತಗಳ ಅಂತರದಿಂದ ಸೋತಿದ್ದರು.

ಆದರೆ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್​ ಡಿ ಕುಮಾರಸ್ವಾಮಿ ಅವರು ತಾವು ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೆ ಆರ್​ ಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್​​ ಹೆಚ್​ ಟಿ ಮಂಜುನಾಥ್​ ಅವರಿಗೆ ಟಿಕೆಟ್​ ಘೋಷಣೆ ಮಾಡಿದೆ.

ಆದರೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡನೇ ಸ್ಥಾನದಲ್ಲಿದ್ದ ತಮಗೆ ಈ ಬಾರಿ ಟಿಕೆಟ್​ ನಿರಾಕರಿಸಲಾಗಿದ್ದರ ವಿರುದ್ಧ ದೇವರಾಜು ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು.

LEAVE A REPLY

Please enter your comment!
Please enter your name here