AAPಗೆ ಭಾಸ್ಕರ್​​ ರಾವ್​​ ಗುಡ್​ಬೈ – ಬಿಜೆಪಿಗೆ ಹೋಗ್ತಾರಾ ಮತ್ತೊಬ್ಬ IPS..?

ಕರ್ನಾಟಕದಲ್ಲಿ ಆಮ್​ ಆದ್ಮಿ ಪಾರ್ಟಿಗೆ ಅತೀ ದೊಡ್ಡ ಆಘಾತ ಎದುರಾಗಿದೆ.

ನಿವೃತ್ತ ಬೆಂಗಳೂರು ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರು ಆಮ್​ ಆದ್ಮಿ ಪಾರ್ಟಿಗೆ ರಾಜೀನಾಮೆ ಕೊಟ್ಟಿದ್ದಾರೆ.

ಇವರು ಮಾರ್ಚ್​ 4ರಂದು ಬಿಜೆಪಿ ಸೇರಲಿದ್ದಾರೆ. ವಿಚಿತ್ರ ಎಂದರೆ ಅವತ್ತೇ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಮೊದಲ ಬಾರಿಗೆ ಅರವಿಂದ್​ ಕೇಜ್ರಿವಾಲ್​ ಕರ್ನಾಟಕ್ಕೆ ಬರುತ್ತಿದ್ದಾರೆ.

11 ತಿಂಗಳ ಹಿಂದೆಯಷ್ಟೇ ಭಾಸ್ಕರ್​ ರಾವ್​ ಅವರು ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಸಮ್ಮುಖದಲ್ಲಿ ಆಪ್​​ಗೆ ಸೇರಿದ್ದರು.

ಭಾಸ್ಕರ್​ ರಾವ್​ ಅವರ ಸೇರ್ಪಡೆ ಬಳಿಕ ಅವರನ್ನು ಕರ್ನಾಟಕದಲ್ಲಿ ಆಪ್​ನ ಪ್ರಮುಖ ಮುಖ ಎಂದು ಬಣ್ಣಿಸಲಾಗಿತ್ತು

ಗುಜರಾತ್​ ಚುನಾವಣೆಯ ವೇಳೆ ಭಾಸ್ಕರ್​ ರಾವ್​ ಅವರು ಆಮ್​ ಆದ್ಮಿ ಪಾರ್ಟಿ ಪರವಾಗಿ ರಣತಂತ್ರಗಳನ್ನು ರೂಪಿಸಲು ತೆರಳಿದ್ದರು.

ಈ ವೇಳೆಯೇ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಬಿಜೆಪಿಯಲ್ಲಿ ಚುನಾವಣಾ ಸಹ ಉಸ್ತುವಾರಿ ಆಗಿರುವ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರ ಜೊತೆಗೆ ಭಾಸ್ಕರ್​ ರಾವ್​ ಅವರು ಮಾತುಕತೆ ನಡೆಸಿದ್ದರು.

ಆ ಬಳಿಕ ಕಂದಾಯ ಸಚಿವ ಆರ್​ ಅಶೋಕ್​ ಅವರ ಜೊತೆಗೂ ಭಾಸ್ಕರ್​ ರಾವ್​ ಮಾತುಕತೆ ನಡೆಸಿದ್ದರು.

ಭಾಸ್ಕರ್​​ ರಾವ್​ ಅವರು ಬಸವನಗುಡಿಯಲ್ಲಿ ಆಮ್​ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಲಿದ್ದಾರೆ ಎಂದು ಭಾವಿಸಲಾಗಿತ್ತು.

ಆಮ್​ ಆದ್ಮಿ ಪಾರ್ಟಿಯಲ್ಲಿ ತಮ್ಮ ರಾಜಕೀಯ ಬೆಳವಣಿಗೆಗೆ ಅವಕಾಶ ನೀಡುತ್ತಿಲ್ಲ ಅಸಮಾಧಾನದಲ್ಲಿ ಭಾಸ್ಕರ್​ ರಾವ್​ ಅವರು ಪಕ್ಷ ಬಿಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here