SSLC ಮತ್ತು ದ್ವಿತೀಯ PUC ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಬಾಲಕಿಯರಿಗೆ 50 ಸಾವಿರ ರೂಪಾಯಿ ಮೊತ್ತದ ಆರ್ಥಿಕ ನೆರವು ನೀಡಲಿದೆ.
ಮೈಸೂರು ಮಹಾನಗರ ಪಾಲಿಕೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಸಂಬಂಧ ಜ್ಞಾನಸಿರಿ ಹೆಸರಲ್ಲಿ ಯೋಜನೆ ಘೋಷಿಸಿದೆ.
ಪಾಲಿಕೆ ಬಜೆಟ್ ಮಂಡನೆಯಾದಾಗ ಆರಂಭದಲ್ಲಿ 10 ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರ ಜೊತೆಗಿನ ಸಮಾಲೋಚನೆ ಬಳಿಕ ಫಲಾನುಭವಿ ವಿದ್ಯಾರ್ಥಿಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಪಾಲಿಕೆ ಮೇಯರ್ ಶಿವಕುಮಾರ್ ಹೇಳಿದ್ದಾರೆ.
ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿರುವ ವಿದ್ಯಾರ್ಥಿನಿಯರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ.
ಈ ಯೋಜನೆಯಡಿಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದಿರುವ ಪಾಲಿಕೆ ವ್ಯಾಪ್ತಿಯ 25 ವಿದ್ಯಾರ್ಥಿನಿಯರು ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದಿರುವ 25 ವಿದ್ಯಾರ್ಥಿನಿಯರು ಒಟ್ಟು 50 ವಿದ್ಯಾರ್ಥಿನಿಯರಿಗೆ ಯೋಜನೆಯ ಲಾಭ ಸಿಗಲಿದೆ.
ಈ ಶೈಕ್ಷಣಿಕ ವರ್ಷದಿಂದಲೇ ಯೋಜನೆ ಜಾರಿಯಾಗಲಿದೆ. ಬಜೆಟ್ನಲ್ಲಿ ಯೋಜನೆಗಾಗಿ 25 ಲಕ್ಷ ರೂಪಾಯಿ ತೆಗೆದಿಡಲಾಗಿದೆ.
ADVERTISEMENT
ADVERTISEMENT