ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇ – 5 ತಿಂಗಳಲ್ಲಿ 570 ಅಪಘಾತ

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮೊದಲು ಮಾರ್ಚ್​ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೆದ್ದಾರಿಯನ್ನು ಉದ್ಘಾಟಿಸಿದರು.
ಈ ಎಕ್ಸ್​ಪ್ರೆಸ್​​ವೇನಲ್ಲಿ ಮೇ ಅಂತ್ಯದವರೆಗೆ ಬರೋಬ್ಬರೀ 570 ಅಪಘಾತಗಳಾಗಿವೆ.
ಎಕ್ಸ್​ಪ್ರೆಸ್​ ವೇನಲ್ಲಿ ಸಂಭವಿಸಿದ ಅಪಘಾತದಲ್ಲಿ 55 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 52 ಮಂದಿಗೆ ಗಂಭೀರ ಗಾಯಗಳಾಗಿವೆ. 279 ಮಂದಿ ಸಣ್ಣಪುಟ್ಟ ಗಾಯಗಳಾಗಿವೆ. 184 ಮಂದಿಗೆ ಮೂಳೆ ಮುರಿತಗಳಾಗಿವೆ.
9 ಸಾವಿರ ಕೋಟಿ ರೂಪಾಯಿ ವೆಚ್ಚದ 118 ಕಿಲೋ ಮೀಟರ್​ ದೂರದ ಎಕ್ಸ್​ಪ್ರೆಸ್​ ವೇಯಲ್ಲಿ ಮೊದಲ ಹಂತದಲ್ಲಿ 55 ಕಿಲೋ ಮೀಟರ್​ನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದರು.