ಸರ್ಕಾರಿ ಶಾಲೆಗಳಿಗೆ ಕಳಪೆ ಸಮವಸ್ತ್ರ ಪೂರೈಕೆ – FIR ದಾಖಲು

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಯಲ್ಲಾಗಿರುವ ಅಕ್ರಮ ಸಂಬಂಧ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.
ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮುದ್ದಯ್ಯ ಎಸ್​, ತಾಂತ್ರಿಕ ವ್ಯವಸ್ಥಾಪಕರಾಗಿದ್ದ ಬಿ ಜಿ ಶ್ರೀಧರ್​, ನಿಗಮದ ಎಸ್ಟೇಟ್​ ಆಫೀಸರ್​ ಬಿ ಲಕ್ಷ್ಮಣ ಸ್ವಾಮಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಭಾರತೀಯ ಅಪರಾಧ ದಂಡ ಸಂಹಿತೆಯ ಕಲಂ 406, 420, 34ರಡಿಯಲ್ಲಿ ಜೂನ್​ 6ರಂದು ಎಫ್​ಐರ್​ ದಾಖಲಾಗಿದೆ.
ಎರಡು ಆರೋಪಗಳು:
1. 2021-22ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ 1 ರಿಂದ 10ರಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆಯಲ್ಲಿ ಅಕ್ರಮ ಎಸಗಲಾಗಿದ್ದು, ನಿಗಮದಿಂದ ಕಳಪೆ ಗುಣಮಟ್ಟದ ಸಮವಸ್ತ್ರವನ್ನು ಪೂರೈಸಲಾಗಿದೆ ಎಂದು ಎಫ್ಐಆರ್​​ನಲ್ಲಿ ದಾಖಲಾಗಿದೆ.
2. ಬೆಂಗಳೂರಿನ ಪೀಣ್ಯ ಎರಡನೇ ಹಂತದಲ್ಲಿರುವ ಪ್ರಿಯದರ್ಶಿನಿ ಸಂಸ್ಕರಣಾ ಕೇಂದ್ರದ ಶೆಡ್​ಗಳನ್ನು ನಿಯಮ ಉಲ್ಲಂಘಿಸಿ 22 ವರ್ಷದ ಮಟ್ಟಿಗೆ ಬಾಡಿಗೆ ನೀಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ದೂರಲಾಗಿದೆ.