ಶಕ್ತಿ ಯೋಜನೆ ಜಾರಿಯಾದ ಬಳಿಕ ನಿನ್ನೆ 11 ಗಂಟೆಗಳ ಅವಧಿಯಲ್ಲಿ ಕರ್ನಾಟಕದಲ್ಲಿ 5 ಲಕ್ಷದ 71 ಸಾವಿರದಷ್ಟು ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ.
5.71 ಲಕ್ಷದಷ್ಟು ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ವೆಚ್ಚ 1 ಕೋಟಿ 40 ಲಕ್ಷದ 22 ಸಾವಿರ ರೂಪಾಯಿ.
ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆಯನ್ನು ಸಾರಿಗೆ ಇಲಾಖೆ ಬಿಡುಗಡೆ ಮಾಡಿದೆ.
ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ನಲ್ಲಿ 1 ಲಕ್ಷದ 93 ಸಾವಿರದ 831 ಮಂದಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ಉಚಿತ ಪ್ರಯಾಣದ ವೆಚ್ಚ 58 ಲಕ್ಷದ 16 ಸಾವಿರ ರೂಪಾಯಿ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2 ಲಕ್ಷದ 1 ಸಾವಿರದ 215 ಮಂದಿ ಮಹಿಳೆಯರು ಪ್ರಯಾಣಿಸಿದ್ದು ಇವರ ಉಚಿತ ಪ್ರಯಾಣದ ವೆಚ್ಚ 26 ಲಕ್ಷದ 19 ಸಾವಿರ ರೂಪಾಯಿ.
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 1 ಲಕ್ಷದ 22 ಸಾವಿರದ 354 ಮಂದಿ ಪ್ರಯಾಣಿಸಿದ್ದು ಇವರ ಉಚಿತ ಪ್ರಯಾಣದ ವೆಚ್ಚ 36 ಲಕ್ಷದ 17 ಸಾವಿರ ರೂಪಾಯಿ.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 53 ಸಾವಿರದ 623 ಮಂದಿ ಪ್ರಯಾಣಿಸಿದ್ದು ಇವರ ಉಚಿತ ಪ್ರಯಾಣದ ವೆಚ್ಚ 19 ಲಕ್ಷದ 70 ಸಾವಿರ ರೂಪಾಯಿ.
ADVERTISEMENT
ADVERTISEMENT