ADVERTISEMENT
ದೆಹಲಿಯಲ್ಲಿ ರಾಪಿಡೊ ಬೈಕ್ ಟ್ಯಾಕ್ಸಿಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಮೂಲಕ ರಾಪಿಡೊ ತನ್ನ ಗ್ರಾಹಕರಿಗೆ ಬೈಕ್ ಸೇವೆಯನ್ನು ನೀಡುವಂತಿಲ್ಲ.
ಬೈಕ್ ಟ್ಯಾಕ್ಸಿ ಬಳಕೆ ಸಂಬಂಧ ದೆಹಲಿ ಸರ್ಕಾರ ಮಾರ್ಗಸೂಚಿಯ ಅಧಿಸೂಚನೆ ಪ್ರಕಟಿಸುವವರೆಗೆ ನಿರ್ಬಂಧ ಹೇರಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅನಿರುದ್ಧ್ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠ ಆದೇಶ ಹೊರಡಿಸಿದೆ.
ರಾಪಿಡೊ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದ್ದ ದೆಹಲಿ ಹೈಕೋರ್ಟ್ನ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉಬರ್ ಮತ್ತು ಓಲಾ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದವು.
ಬೈಕ್ ಟ್ಯಾಕ್ಸಿ ಸೇವೆ ಸಂಬಂಧ ದೆಹಲಿ ಸರ್ಕಾರ ಮಾರ್ಗಸೂಚಿ ಸಿದ್ಧಪಡಿಸುವ ಪ್ರಕ್ರಿಯೆಲ್ಲಿರುವಾಗ ಅದರ ಅಧಿಸೂಚನೆ ಹೈಕೋರ್ಟ್ ತಡೆ ನೀಡುರುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಅಭಿಪ್ರಾಯದಲ್ಲಿ ಹೇಳಿದೆ.
ADVERTISEMENT