BIG BREAKING: ರಾಹುಲ್​ ಗಾಂಧಿ ಗೆ 2 ವರ್ಷಗಳ ಜೈಲು ಶಿಕ್ಷೆ ಪ್ರಕಟ, ಜಾಮೀನು ಮಂಜೂರು

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಡಲಾದ ಅವಹೇಳನಕಾರಿ ಹೇಳಿಕೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತಪ್ಪಿತಸ್ಥ ಎಂದು ಕೋರ್ಟ್​ ತೀರ್ಪು ನೀಡಿದೆ. 

ದೋಷಿ ಎಂದು ಪ್ರಕಟಿಸಿರುವ ಕೋರ್ಟ್​ ರಾಹುಲ್​ ಗಾಂಧಿ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ.

ಬಳಿಕ ನ್ಯಾಯಾಲಯ ರಾಹುಲ್​ ಗಾಂಧಿ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಕೋರ್ಟ್​ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಯ ಕೇಳಿದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ. ಮೇಲ್ಮನವಿಗೆ 30 ದಿನಗಳ ಸಮಯ ನೀಡಲಾಗಿದೆ.

ಗುಜರಾತ್​ ರಾಜ್ಯದ ಸೂರತ್​ ಜಿಲ್ಲಾ ಕೋರ್ಟ್​​ ರಾಹುಲ್​ ಗಾಂಧಿ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.

ರಾಹುಲ್​ ಗಾಂಧಿ ವಿರುದ್ಧ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.

ತೀರ್ಪು ನೀಡುವ ವೇಳೆ ರಾಹುಲ್​ ಅವರು ಸೂರತ್​ ಕೋರ್ಟ್​ನಲ್ಲಿ ಹಾಜರಿದ್ದರು. 2019ರಲ್ಲಿ ರಾಹುಲ್​ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.

ಕಳ್ಳರಿಗೆಲ್ಲ ಮೋದಿ ಎಂಬ ಹೆಸರು ಹೇಗೆ ಬಂದಿದೆ ಎಂದು ನರೇಂದ್ರ ಮೋದಿ ಅವರನ್ನು ಟಾರ್ಗೆಟ್​ ಮಾಡಿ ನೀರವ್​ ಮೋದಿ ಪ್ರಕರಣವನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದರು. 

ಮೋದಿ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.