ಶ್ರವಣಬೆಳಗೊಳ ಜೈನಮಠದ ಶ್ರೀಗಳು ವಿಧಿವಶ – ಸಂಜೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ, ಇವತ್ತೇ ಅಂತ್ಯಕ್ರಿಯೆ

ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಮಠದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಇಂದು ಮುಂಜಾನೆ 5.30ಕ್ಕೆ ಸಮಾಧಿ ಮರಣ ಹೊಂದಿದ್ದಾರೆ ಎಂದು ಶ್ರವಣಬೆಳಗೊಳ ಮಠದ ಆಡಳಿತ ಮಂಡಳಿ ಹೇಳಿದೆ.

ಮದ್ಯಾಹ್ನ 12.30ರಿಂದ ಸಂಜೆ 4.30ರವರೆಗೆ ಶ್ರೀಮಠದ ಮುಂಭಾಗದ ಚಾಮುಂಡರಾಯ ಸಭಾ ಮಂಟಪದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಚಾಮುಂಡರಾಯ ಮಂಟಪದಿಂದ ನಿಶಿಧಿ ಮಂಟಪದ ಕಡೆಗೆ ಅಂತಿಮ ಯಾತ್ರೆ ಸಂಜೆ 4.30ರ ವೇಳೆಗೆ ಹೊರಡಲಿದೆ ಎಂದು ಮಠದ ಆಡಳಿತ ಮಂಡಳಿ ಮಾಹಿತಿ ನೀಡಿದೆ.