ನರೇಂದ್ರ ಮೋದಿ ಅವರು ಹೊಸ ಭಾರತದ ರಾಷ್ಟ್ರಪಿತ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರ ಪತ್ನಿ ಅಮೃತ ಫಡ್ನಾವೀಸ್ ಹೇಳಿದ್ದಾರೆ.
ಭಾರತಕ್ಕೆ ಇಬ್ಬರು ರಾಷ್ಟ್ರಪಿತರು. ಮಹಾತ್ಮ ಗಾಂಧಿ ಭಾರತದ ರಾಷ್ಟ್ರಪಿತ ಮತ್ತು ಮೋದಿ ಹೊಸ ಭಾರತದ ರಾಷ್ಟ್ರಪಿತ. ಭಾರತಕ್ಕೆ ಇಬ್ಬರು ರಾಷ್ಟ್ರಪಿತರು, ಒಬ್ಬರು ಆ ಯುಗಕ್ಕೆ, ಇನ್ನೊಬ್ಬರು ಈ ಯುಗಕ್ಕೆ
ಎಂದು ಮರಾಠಿಯಲ್ಲಿ ನೀಡಿದ ಸಂದರ್ಶನದಲ್ಲಿ ಅಮೃತ ಫಡ್ನಾವೀಸ್ ಹೇಳಿದ್ದಾರೆ.
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ವೇಳೆ ಭಾರತದ ರಾಷ್ಟ್ರಪಿತ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು – ಸಮಾಜದ ಒಳಿತಿಗಾಗಿ ಅವಿರತವಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತಿದ್ದಾರೆ
ಎಂದು ಅಮೃತ ಫಡ್ನಾವೀಸ್ ಅವರು ಸೆಪ್ಟೆಂಬರ್ 17, 2019ರಂದು ಟ್ವೀಟಿಸಿದ್ದರು.
ADVERTISEMENT
ADVERTISEMENT