ಕಟೀಲು ಮೇಳದ ಯಕ್ಷಗಾನ ಕಲಾವಿದ ರಂಗಸ್ಥಳದಲ್ಲೇ ಹೃದಯಾಘಾತದಿಂದ ನಿಧನ

ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ಅವರು ಶಿಶುಪಾಲನ ಪಾತ್ರದಲ್ಲಿ
ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ಅವರು ಶಿಶುಪಾಲನ ಪಾತ್ರದಲ್ಲಿ
ಯಕ್ಷಗಾನ ಕಲಾವಿದರೊಬ್ಬರು ರಂಗಸ್ಥಳದಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. 58 ವರ್ಷದ ಗುರುವಪ್ಪ ಬಾಯಾರು ರಂಗಸ್ಥಳದಲ್ಲೇ ನಿಧನರಾದ ಕಲಾವಿದ.
ಇವರು ಕಟೀಲು ಶ್ರೀದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಕಲಾವಿದ. ನಿನ್ನೆ ಕಟೀಲು ಸರಸ್ವತಿ ಸದನದಲ್ಲಿ ನಡೆಯುತ್ತಿದ್ದ ತ್ರಿಜನ್ಮ ಮೋಕ್ಷ ಯಕ್ಷಗಾನದಲ್ಲಿ ಗುರುವಪ್ಪ ಬಾಯಾರು ಅವರು ಶಿಶುಪಾಲನ ಪಾತ್ರಧಾರಿಯಾಗಿದ್ದರು.
ರಂಗಸ್ಥಳದಲ್ಲಿ ಹೃದಯಾಘಾತವಾದ ಬೆನ್ನಲ್ಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

LEAVE A REPLY

Please enter your comment!
Please enter your name here