ನಾಲ್ಕು ತಿಂಗಳ ಹಿಂದೆ ಮದ್ವೆ ಆಗಿದ್ದ ನಯನತಾರಾ ದಂಪತಿಗೆ ಅವಳಿ ಮಕ್ಕಳು – ಮಕ್ಕಳಿಬ್ಬರಿಗೂ ನಾಮಕರಣ

Nayanatara and Vignesh welcomes twin boys
Nayanatara and Vignesh welcomes twin boys
ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನಯನತಾರಾ (Nayanthara) ಮತ್ತು ವಿಘ್ನೇಶ್​​ ಶಿವನ್​ (Vignesh Shivan) ದಂಪತಿಗೆ ಅವಳಿ ಮಕ್ಕಳ ಭಾಗ್ಯ.
ನಟಿ ನಯನತಾರಾ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ವಿಘ್ನೇಶ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇಬ್ಬರು ಮಕ್ಕಳಿಗೆ ಹೆಸರನ್ನೂ ಇಡಲಾಗಿದೆ. ಉಯಿರ್ (ಜೀವನ)​ ಮತ್ತು ಉಳಗಂ (ಜಗತ್ತು) ಎಂದು ಅವಳಿ ಗಂಡು ಮಕ್ಕಳಿಗೆ ನಾಮಕರಣ ಮಾಡಲಾಗಿದೆ.

ಕಂದಮ್ಮಗಳ ಪಾದಕ್ಕೆ ತಾಯಿ ನಯನತಾರಾ ಮತ್ತು ತಾವು ಮುತ್ತುಕೊಡುತ್ತಿರುವ ಫೋಟೋವನ್ನು ವಿಘ್ನೇಶ್​ ಹಂಚಿಕೊಂಡಿದ್ದಾರೆ.
Nayanathara Vignesh Wedding
Nayanathara Vignesh Wedding
ಜೂನ್​ 9ರಂದು ನಯನತಾರಾ ಮತ್ತು ವಿಘ್ನೇಶ್​ ಮದುವೆ ಆಗಿದ್ದರು.