ಕಾರ್ಕಳ ನಗರ ಬಿಜೆಪಿ ಆಶ್ರಯದಲ್ಲಿ ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (ಆಭಾ ಕಾರ್ಡ್) ಇದರ ಉಚಿತ ನೋಂದಣಿ ಕಾರ್ಯಾಗಾರವನ್ನು ಕಾರ್ಕಳ ಪುರಸಭೆಯ 16ನೇ ವಾರ್ಡಿನ (ಕಾರ್ಕಳ ಮದ್ಯಪೇಟೆ) ಸಾರ್ವಜನಿಕರಿಗಾಗಿ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಜಯರಾಮ್ ಪ್ರಭು (ಆಡಳಿತ ಮೊಕ್ತೇಸರರು ಶ್ರೀ ವೆಂಕಟರಮಣ ದೇವಸ್ಥಾನ ಕಾರ್ಕಳ) ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಕಳ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ರವೀಂದ್ರ ಮೊಯಿಲಿ , ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀ ರಾಮಚಂದ್ರ ನಾಯಕ್, ವಾರ್ಡಿನ ಚುನಾಯಿತ ಪ್ರತಿನಿಧಿಗಳಾದ ಶೋಭಾ ದೇವಾಡಿಗ, ನಾಮನಿರ್ದೇಶಿತ ಸದಸ್ಯರಾದ ಶ್ರೀಮತಿ ಸಂಧ್ಯಾ ಮಲ್ಯ , ಹಾಗೂ ಆಶಾ ಕಾರ್ಯಕರ್ತೆ ಶ್ರೀಮತಿ ಸುಹಾಸಿನಿ ದೇವಾಡಿಗ ಹಾಗೂ ಶ್ರೀ ಸುದರ್ಶನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರಕಾರಿ ಆಸ್ಪತ್ರೆ ಕಾರ್ಕಳ ಇದರ ಆರೋಗ್ಯಾಧಿಕಾರಿ ಚೇತನ್ ರವರು ಆಭಾ ಕಾರ್ಡಿನ ಬಗ್ಗೆ ವಿವರವಾದ ಮಾಹಿತಿಯನ್ನು ಜನತೆಗೆ ನೀಡಿದರು. ಈ ಸಂದರ್ಭದಲ್ಲಿ ವಾರ್ಡಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಯಾದ ಕುಮಾರಿ ಅಮೃತಾ ಮಲ್ಯ ಇವರನ್ನು ಅಭಿನಂದಿಸಲಾಯಿತು.
ನಗರ ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್ ರವರು ನಿರೂಪಿಸಿ ವಂದನಾರ್ಪಣೆಗೈದರು.