ರಶ್ಮಿಕಾ ಫೋಟೋ ಫುಲ್ ವೈರಲ್.. ದೇವರಕೊಂಡ ಫ್ಯಾನ್ಸ್ ಫುಲ್ ಖುಷ್.. ಅದ್ರಲ್ಲಿ ಅಂಥಾದ್ದೇನಿದೆ?

ಪುಷ್ಪ ಸಿನೆಮಾ ಬಳಿಕ ನ್ಯಾಷನಲ್ ಕ್ರಶ್ ಆಗಿ ಬದಲಾದ ಸ್ಟಾರ್ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna)ಸದ್ಯ ಮಾಲ್ಡಿವ್ಸ್ ನಲ್ಲಿ ರಜೆ ದಿನಗಳನ್ನು ಫುಲ್ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ನಲ್ಲಿ ಎಂಜಾಯ್ ಮಾಡ್ತಿರೋ ಫೋಟೋ ವನ್ನು ಅಪ್ ಲೋಡ್ ಮಾಡಿದ್ದಾರೆ. ಅದರಲ್ಲಿ ಈಜು ಕೊಳದ ಪಕ್ಕದಲ್ಲಿ ಕುಳಿತ ರಶ್ಮಿಕಾ ಮಂದಣ್ಣ ಫ್ಲೋಟಿಂಗ್ ಫುಡ್ (Flooting food)ಎಂಜಾಯ್ ಮಾಡ್ತಿದ್ದಾರೆ. ಅದರಲ್ಲೇನು ವಿಶೇಷ ಸಾಮಾನ್ಯವಾಗಿ ಟ್ರಿಪ್ ಹೋದ ನಟ ನಟಿಯರೆಲ್ಲ ಇಂತಹ ಫೋಟೋ ಹಾಕಿಕೊಳ್ತಾರೆ ಎಂದು ಮೂಗು ಮುರಿಯಬೇಡಿ. ಅಲ್ಲೇ ಇರೋದು ವಿಶೇಷ.

ಎಲ್ಲರ ಗಮನ ಸೆಳೆಯುತ್ತಿರೋದು ರಶ್ಮಿಕಾ ಮಂದಣ್ಣ ಧರಿಸಿರುವ ಬ್ರಾಂಡೆಡ್ ಕೂಲಿಂಗ್ ಗ್ಲಾಸ್.. ಇದನ್ನು ವಿಜಯ್ ದೇವರಕೊಂಡ ಅವರಷ್ಟೇ ಧರಿಸುತ್ತಾರೆ.. ಹೀಗಾಗಿ ರಶ್ಮಿಕಾ ವಿಜಯ್ ದೇವರಕೊಂಡ (Vijay Devarakonda)ಜೊತೆಯೇ ವೇಕೇಶನ್ ಎಂಜಾಯ್ ಮಾಡ್ತಿದ್ದಾರೆ ಎಂದು ಇತ್ತ ರಶ್ಮಿಕಾ ಫ್ಯಾನ್ಸ್ ಅತ್ತ ದೇವರಕೊಂಡ ಫ್ಯಾನ್ಸ್ ಕನ್ಫರ್ಮ್ ಮಾಡಿಕೊಂಡಿದ್ದು ಫುಲ್ ಖುಷಿ ಆಗಿದ್ದಾರೆ. ಹೀಗಾಗಿ ರಶ್ಮಿಕಾ ಗೆ ವಿಜಯ್ ಜೊತೆ ಇರೋ ಫೋಟೋ ಅಪ್ ಲೋಡ್ ಮಾಡಿ ಎಂದು ದುಂಬಾಲು  ಬಿದ್ದಿದ್ದಾರೆ. ಇದಕ್ಕೆ ರಶ್ಮಿಕಾ ಮಂದಣ್ಣ ಸ್ಪಂದಿಸುತ್ತಾರೋ ಇಲ್ಲವೋ?

ಜೊತೆಗೆ hi love ಎಂದು ಬರೆದಿರೋ mirror ಮುಂದೆ ರಶ್ಮಿಕಾ ಪೋಸ್ ನೀಡಿದ್ದಾರೆ.

ಮೂರು ದಿನಗಳ ಹಿಂದಷ್ಟೇ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮಾಲ್ಡಿವ್ಸ್ (Maldives)ಹೋಗಿರುವ ಸುದ್ದಿ ಆಗಿತ್ತು.

ಕಳೆದ ಕೆಲ ತಿಂಗಳಿಂದ ಇಬ್ಬರು ಲವ್ವಲ್ಲಿ ಮುಳುಗಿದ್ದಾರೆ ಎಂಬುದು ಟಾಲಿವುಡ್ ನಲ್ಲಿ ಕೇಳಿಬರುತ್ತಿರುವ ಗುಸುಗೂಸು.

ಈ ಹಿಂದೆಯೂ ದೇವರಕೊಂಡ ಕುಟುಂಬ ಸದಸ್ಯರ ಜೊತೆ ರಶ್ಮಿಕಾ ಟ್ರಿಪ್ ಹೋಗಿದ್ದ ಬಗ್ಗೆ ವರದಿ ಆಗಿತ್ತು. ಹಾಗಿದ್ರೆ, ಕೊಡಗು ಪಿಲ್ಲ ಹೈದೆರಾಬಾದ್ ಕೋಡಲು ಆಗ್ತಾರಾ..? ಇನ್ನಷ್ಟೇ ಕಾದು ನೋಡಬೇಕು