BIG BREAKING: ಕಾಂಗ್ರೆಸ್​ ಲಿಂಗಾಯತ ನಾಯಕನಿಗೆ ಡಿಕೆ ಸುರೇಶ್​ ಎಚ್ಚರಿಕೆ – MBP v/s D K ಸಹೋದರರು..!

ಇವತ್ತು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವ ಎಂಬಿ ಪಾಟೀಲ್​ ಅವರಿಗೆ ಸಂಸದ ಡಿ ಕೆ ಸುರೇಶ್​ ನೇರವಾಗಿ ಎಚ್ಚರಿಕೆ ಕೊಟ್ಟಿರುವ ಪ್ರಸಂಗ ನಡೆದಿದೆ.

ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ, ಕಾಂಗ್ರೆಸ್​ ರಾಷ್ಟ್ರೀಯ ನಾಯಕರ ತೀರ್ಮಾನವೂ ಅದೇ ಎಂದು ಸಚಿವ ಎಂ ಬಿ ಪಾಟೀಲ್​ ಅವರು ಮೈಸೂರಲ್ಲಿ ಹೇಳಿದ್ದರು ಮತ್ತು ಬೆಂಗಳೂರಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಶಾಸಕಾಂಗ ಪಕ್ಷದ ಸಭೆಯ ವೇಳೆ ಎಂ ಬಿ ಪಾಟೀಲ್​ ನೀಡಿದ ಹೇಳಿಕೆಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರ ಸಹೋದರ ಡಿ ಕೆ ಸುರೇಶ್​ ಪ್ರಸ್ತಾಪಿಸಿ ಎಚ್ಚರಿಕೆ ಕೊಟ್ಟರು.

ಹಾಗೆ ಹೇಳೋಕೆ ನೀವು ಯಾರು..? ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಲು ನೀವು ಯಾರಿ..? 

ಎಂದು ಡಿಕೆ ಸುರೇಶ್​ ಏರು ಧ್ವನಿಯಲ್ಲಿ ಎಂ ಬಿ ಪಾಟೀಲ್​ ಅವರ ವಿರುದ್ಧ ಮಾತಾಡಿದರು.

ಈ ಹಿಂದೆ ಸಿದ್ದರಾಮಯ್ಯ ಐದು ವರ್ಷದ ರಾಜ್ಯ ಮುಖ್ಯಮಂತ್ರಿ ಆಗಿದ್ದರು. ಈಗ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಮತ್ತೆ ಐದು ವರ್ಷ ಬೇಕಾದರೂ ಅವರೇ ಮುಖ್ಯಮಂತ್ರಿ ಆಗಿರಲಿ, ಬೇಡ ಎಂದವರು ಯಾರು..? ಎಂ ಬಿ ಪಾಟೀಲ್​ ಕೂಡಾ ಸಿಎಂ ಆಗಲಿ ಬಿಡಿ

ಎಂದು ಏರುಧ್ವನಿಯಲ್ಲಿ ಎಂ ಬಿ ಪಾಟೀಲ್​ ಅವರ ವಿರುದ್ಧ ಡಿಕೆಸುರೇಶ್​ ಗುಡುಗಿದರು.

ಡಿಕೆ ಸುರೇಶ್​ ವರ್ತನೆಯಿಂದ ಸಿಟ್ಟಾದ ಎಂಬಿ ಪಾಟೀಲ್​ ತಿರುಗೇಟು ಕೊಟ್ಟರು.

ನಾನೇನು ಬೇರೆ ಹೇಳಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್​ ಏನು ಹೇಳಿದ್ದಾರೋ ಅದನ್ನೇ ಹೇಳಿದ್ದೇನೆ. ಐದು ವರ್ಷದ ಅಧಿಕಾರದ ಹಂಚಿಕೆ ಜನರ ಜೊತೆಗೆ ಮಾತ್ರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೇ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ರಲ್ಲ

ಎಂದು ಎಂ ಬಿ ಪಾಟೀಲ್​ ತಿರುಗೇಟು ಕೊಟ್ಟರು.