ಜೆಡಿಎಸ್​ ಸೋಲಿಗೆ ನಾನೇ ಹೊಣೆ – ಅಧ್ಯಕ್ಷ ಸ್ಥಾನಕ್ಕೆ ಇಬ್ರಾಹಿಂ ರಾಜೀನಾಮೆ

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಳಿಕ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ ಎಂ ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ.

ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಬಳಿಕ ಇಬ್ರಾಹಿಂ ಹೇಳಿದ್ದಾರೆ.

ನಮ್ಮದು ಪ್ರಾದೇಶಿಕ ಪಕ್ಷ, ನಮ್ಮ ಬಳಿ ಹಣ ಇಲ್ಲ. ಆದರೂ 60 ಲಕ್ಷ ಮತ ಪಡೆದಿದ್ದೇವೆ. ಕಾಂಗ್ರೆಸ್​​ನವರಿಗೆ ಮೂರು ತಿಂಗಳ ಸಮಯ ಕೊಡ್ತೀವಿ, ಅಷ್ಟರೊಳಗೆ ಕಾಂಗ್ರೆಸ್​ನವರು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಿ 

ಎಂದು ಸಿ ಎಂ ಇಬ್ರಾಹಿಂ ಹೇಳಿದ್ದಾರೆ.

ಕಾಂಗ್ರೆಸ್​ನಿಂದ ಪಕ್ಷಕ್ಕೆ ಇಬ್ರಾಹಿಂರನ್ನು ಕರೆತಂದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಜೆಡಿಎಸ್​ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರು. ಸಕಲೇಶಪುರದ ಮಾಜಿ ಶಾಸಕ, ದಲಿತ ಸಮುದಾಯದ ಹೆಚ್​ ಕೆ ಕುಮಾರಸ್ವಾಮಿ ಕಣ್ಣೀರು ಹಾಕುತ್ತಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇಬ್ರಾಹಿಂ ಜೆಡಿಎಸ್​ ರಾಜ್ಯಾಧ್ಯಕ್ಷರಾದ ಬಳಿಕ ಜೆಡಿಎಸ್​​ ಯಾವುದೇ ಚುನಾವಣೆಯಲ್ಲೂ ಗೆಲುವು ಕಂಡಿಲ್ಲ. ಇಬ್ರಾಹಿಂ ಮೂಲಕ ಮುಸ್ಲಿಂ ಮತ ಸೆಳೆಯುವ ಕುಮಾರಸ್ವಾಮಿ ತಂತ್ರವೂ ವಿಫಲವಾಗಿದೆ.