ADVERTISEMENT
ಸ್ವತಂತ್ರ ಮಣಿಪುರಕ್ಕಾಗಿ ಶಸ್ತ್ರಾಸ್ತ್ರ ಹೋರಾಟ ನಡೆಸುತ್ತಿದ್ದ ಮಣಿಪುರ ಅತ್ಯಂತ ಹಳೆಯ ಪ್ರತ್ಯೇಕತಾವಾದಿ ಸಂಘಟನೆಯ ಜೊತೆಗೆ ಭಾರತ ಸರ್ಕಾರ ಮತ್ತು ಮಣಿಪುರ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಯುಎನ್‌ಎಲ್‌ಎಫ್), ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಡುವೆ ನಡೆದಿರುವ ತ್ರಿಪಕ್ಷೀಯ ಒಪ್ಪಂದದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಎಕ್ಸ್ ಖಾತೆ (ಈ ಹಿಂದಿನ ಟ್ವಿಟ್ಟರ್)ನಲ್ಲಿ ಘೋಷಣೆ ಮಾಡಿದ್ದಾರೆ.
ಈ ಮೂಲಕ ಮಣಿಪುರದಲ್ಲಿ ಸಂಘಟನೆ ೬೦ ವರ್ಷಗಳಿಂದ ನಡೆಸುತ್ತಿದ್ದ ಶಸ್ತ್ರಾಸ್ತ್ರ ಸಂಘರ್ಷ ಕೊನೆಯಾಗಿದೆ ಎಂದು ಸಚಿವ ಶಾ ಅವರು ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಈಶಾನ್ಯ ಭಾರತ ಯುವಕರ ಭವ್ಯ ಭವಿಷ್ಯಕ್ಕಾಗಿ ಇದು ಐತಿಹಾಸಿಕ ಸಾಧನೆ ಎಂದು ಅಮಿತ್ ಶಾ ಅವರು ತ್ರಿಪಕ್ಷೀಯ ಒಪ್ಪಂದವನ್ನು ಬಣ್ಣಿಸಿದ್ದಾರೆ.
೧೯೬೪ರ ನವೆಂಬರ್ ೨೪ರಂದು ಯುಎನ್‌ಎಲ್ಎಫ್ ಸ್ಥಾಪನೆಯಾಗಿತ್ತು.
೨೦೧೨ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ವಿರುದ್ಧವೇ ಯುದ್ಧ ಸಾರಿದ ಆರೋಪದಡಿ ಯುಎನ್‌ಎಲ್‌ಎಫ್ ಮುಖ್ಯಸ್ಥ ರಾಜ್‌ಕುಮಾರ್ ಮೆಘೆನ್ ಅಲಿಯಾಸ್ ಸನಾಯೈಮಾನನ್ನು ರಾಷ್ಟ್ರೀಯ ತನಿಖಾ ದಳವು ಉಗ್ರಗಾಮಿ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ಬಂಧಿಸಿತ್ತು.
ADVERTISEMENT