ಧರ್ಮಸ್ಥಳದಲ್ಲಿ ಡಿಸೆಂಬರ್ 8ರಿಂದ 12ರವರೆಗೆ ಐದು ದಿನ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.
ಮೊದಲ ದಿನವಾದ ಡಿಸೆಂಬರ್ 8ರಂದು ಹೊಸ ಕಟ್ಟೆ ಉತ್ಸವ, ಡಿಸೆಂಬರ್ 9ರಂದು ಕೆರೆ ಕಟ್ಟೆ ಉತ್ಸವ, ಡಿಸೆಂಬರ್ 10ರಂದು ಲಲಿತೋದ್ಯಾನ ಉತ್ಸವ, ಡಿಸೆಂಬರ್ 11ರಂದು ಕಂಚಿಮಾರು ಕಟ್ಟೆ ಉತ್ಸವ, ಡಿಸೆಂಬರ್ 12ರಂದು ಗೌರಿಮಾರು ಕಟ್ಟೆ ಉತ್ಸವ ನಡೆಯಲಿದೆ.
ಡಿಸೆಂಬರ್ 13ರಂದು ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನಡೆಯಲಿದೆ.
ಡಿಸೆಂಬರ್ 11 ಮತ್ತು 12ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಭಾಗವಹಿಸಲಿದ್ದಾರೆ.