ಮದುವೆಗೆ ಒಪ್ಪದ ಶಿಕ್ಷಕಿಯನ್ನು ಬೆಳ್ಳಂಬೆಳಗ್ಗೆ ಅಪಹರಿಸಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಹಾಸನದ ಬಿಟ್ಟಗೌಡನಹಳ್ಳಿಯಲ್ಲಿ ಶಾಲೆಗೆ ಹೊರಟ್ಟಿದ್ದ ಶಿಕ್ಷಕಿ ಅರ್ಪಿತಾರನ್ನು ಕಾರಿನಲ್ಲಿ ಅಪಹರಿಸಲಾಗಿದೆ.
ಶಿಕ್ಷಕಿಯ ಸಂಬಂಧಿಯೂ ಆಗಿರುವ ರಾಮು ಎಂಬಾತ ಈ ಕೃತ್ಯ ಎಸಗಿದ್ದಾನೆ.
ಮನೆಯ ಗೇಟ್ನಿಂದ ಹೊರಗೆ ಬಂದಿದ್ದ ಶಿಕ್ಷಕಿ ಅರ್ಪಿತಾ ಬಳಿಯೇ ರಾಮು ನಿಂತಿದ್ದ. ಬಳಿಕ ಕೆಲವೇ ಸೆಕೆಂಡ್ನಲ್ಲಿ ಅಲ್ಲಿಗೆ ಕಾರೊಂದು ಬಂತು. ಕಾರು ಬಂದ ತಕ್ಷಣವೇ ಆರೋಪಿ ರಾಮು ಮತ್ತು ಇನ್ನೋರ್ವ ಬಲವಂತವಾಗಿ ಶಿಕ್ಷಕಿ ಅರ್ಪಿತಾರನ್ನು ಕಾರಿನೊಳಗೆ ತಳ್ಳಿ ಅಪಹರಿಸಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ADVERTISEMENT
ADVERTISEMENT