ನಾನು ಪ್ರಧಾನಿ ಅತ್ತೆ ಅಂದ್ರೇ ಯಾರೂ ನಂಬಲಿಲ್ಲ.. ಮೇಲೆ ಕೆಳಗೆ ನೋಡಿದ್ರು.. – ಸುಧಾಮೂರ್ತಿ ಲಂಡನ್ ಅನುಭವ..

ಆಕೆ ಸಾವಿರಾರು ಕೋಟಿಯ ಒಡತಿ.. ಪ್ರಭಾವ ಇದ್ದರೂ ಆಕೆಯ ವೇಷಭೂಷಣ, ನಿರಾಡಂಬರತೆ, ಸರಳತೆ ನೋಡಿದರೇ ಪಕ್ಕದ್ಮನೆ ಗೃಹಿಣಿಯ ರೀತಿ ಇರುತ್ತಾರೆ..

ಬಹುಶಃ ಇದಕ್ಕೆ ಎನಿಸುತ್ತೆ, ತಾನು ಪ್ರಧಾನಿಯವರ ಅತ್ತೆ ಎಂದರೂ ಯಾರು ನಂಬಲಿಲ್ಲ ಎನ್ನುತ್ತಾರೆ ಸುಧಾಮೂರ್ತಿ. ದಿ ಕಪಿಲ್ ಶರ್ಮಾ ಶೋನಲ್ಲಿ ಪಾಲ್ಗೊಂಡಿದ್ದ ಇನ್ಫೊಸಿಸ್ ಫೌಂಡೇಶನ್​ನ ಸುಧಾಮೂರ್ತಿ ಲಂಡನ್ ಅನುಭವಗಳ ಬುತ್ತಿ ಬಿಚ್ಚಿಟ್ಟಿದ್ದಾರೆ.

‘ಇತ್ತೀಚಿಗೆ ನಾನು ಲಂಡನ್ ಹೋಗಿದ್ದೆ.. ಅಲ್ಲಿನ ಇಮ್ಮಿಗ್ರೇಷನ್ ಅಧಿಕಾರಿಗಳು ನನ್ನ ರೆಸಿಡೆನ್ಶಿಯಲ್ ಅಡ್ರೆಸ್ ಬಗ್ಗೆ ಕೇಳಿದರು. ಲಂಡನ್‌ನಲ್ಲಿ ಎಲ್ಲಿ ಇರುತ್ತೀರಾ ಎಂದು ಪ್ರಶ್ನಿಸಿದರು.. ಆಗ ನನ್ನ ಜೊತೆ ನಮ್ಮ ಅಕ್ಕ ಇದ್ದರು.. ನನ್ನ ಮಗ ಕೂಡ ಯುಕೆಯಲ್ಲಿಯೇ ಇರುತ್ತಾನೆ..ಆದರೆ, ಅವನ ಅಡ್ರೆಸ್ ಸರಿಯಾಗಿ ಗೊತ್ತಿರಲಿಲ.. ಹೀಗಾಗಿ ನಾನು ನನ್ನ ಅಳಿಯ ರಿಶಿ ಸುನಾಕ್ ನಿವಾಸವಾದ 10-ಡೌನಿಂಗ್ ಸ್ಟ್ರೀಟ್ ಅಡ್ರೆಸ್ ಅನ್ನು ಬರೆದೆ.. ಅದನ್ನು ನೋಡಿದ ಕೂಡಲೇ ಇಮ್ಮಿಗ್ರೇಷನ್ ಅಧಿಕಾರಿ ನನ್ನನ್ನು ಮೇಲಿಂದ ಕೆಳಕ್ಕೆ ನೋಡಿ, ಏನು ಜೋಕ್ ಮಾಡುತ್ತಿದ್ದೀರಾ ಎಂದು ಕೇಳಿದರು.’

ನಾನು ನಿಜ ಹೇಳಿದರೂ ಅವರು ನಂಬಿದಂತೆ ಕಾಣಲಿಲ್ಲ.. ನನ್ನಂತೆ ಸಿಂಪಲ್ ಆಗಿರುವ ಮಹಿಳೆ ಪ್ರಧಾನಿಯ ಅತ್ತೆ ಎಂದರೇ ಅಲ್ಲಿ ಯಾರು ನಂಬಲಿಲ್ಲ’

ಎಂದು ಆ ಘಟನೆಯ ನೆನಪಿನ ಬುತ್ತಿಯನ್ನು ಸುಧಾಮೂರ್ತಿ ಅನಾವರಣ ಮಾಡಿದ್ದಾರೆ.