ADVERTISEMENT
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೈನ ಸಮುದಾಯದವರಿಗೆ 13 ಕ್ಷೇತ್ರಗಳಿಂದ ಟಿಕೆಟ್ ನೀಡುವಂತೆ ಬಿಜೆಪಿ ಮತ್ತು ಕಾಂಗ್ರೆಸ್ಗೆ ಜೈನ ಸಮುದಾಯ ಆಗ್ರಹಿಸಿದೆ.
ರಾಜ್ಯದಲ್ಲಿ 5 ಲಕ್ಷದಷ್ಟು ಜೈನ ಸಮುದಾಯವರಿದ್ದಾರೆ. ಅಲ್ಪಸಂಖ್ಯಾತ ಜೈನ ಸಮುದಾಯದನ್ನು ಪ್ರತಿನಿಧಿಸಿ ರಾಜ್ಯದ ವಿಧಾನಸಭಾ ಕ್ಷೇತ್ರಗಲ್ಲಿ ನಮ್ಮ ಕುಂದುಕೊರತೆಗಳಿಗೆ ಸ್ಪಂದಿಸಿ ನಿವಾರಿಸಿಕೊಡುವಂತಹ ಯಾವ ಪ್ರತಿನಿಧಿಯೂ ಇಲ್ಲ. ಈ ಹಿನ್ನೆಲೆಯಲ್ಲಿ ಜೈನ ಸಮಾಜದವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಬಿ ಪ್ರಸನ್ನಯ್ಯ ಪತ್ರ ಬರೆದಿದ್ದಾರೆ.
ಜೈನ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಬಿಜೆಪಿಗೆ ಕೇಳಲಾಗಿರುವ ಕ್ಷೇತ್ರಗಳು:
ಬೆಳಗಾವಿ ದಕ್ಷಿಣ: ಅಭಯ ಪಾಟೀಲ್
ಬೆಳಗಾವಿ ಗ್ರಾಮೀಣ: ಸಂಜಯ್ ಪಾಟೀಲ್
ಖಾನಾಪೂರ: ಪ್ರಮೋದಗ್ ಕೊಚೇರಿ
ಜಮಖಂಡಿ: ಚಂದ್ರಕಾಂತ ತವನಪ್ಪ ಉಪಾಧ್ಯೆ
ತೇರದಾಳ: ಡಾ. ಮಹಾವೀರ್ ಜೈನ್ ದಾನಿಗೋಡು, ಕಿರಣ್ ಕುಮಾರ್ ದೇವಲ ದೇಸಾಯಿ
ರಾಜಾಜಿನಗರ: ಬಾಹುಬಲಿ ಗೌರಜ್
ಧಾರವಾಡ: ತವನಪ್ಪ ಪಾಯಪ್ಪ ಅಷ್ಟಗಿ
ಜೈನ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಕಾಂಗ್ರೆಸ್ನಿಂದ ಕೇಳಲಾಗಿರುವ ಕ್ಷೇತ್ರಗಳು:
ನಿಪ್ಪಾಣಿ: ಉತ್ತಮ್ ರಾವಸಾಹೇಬ ಪಾಟೀಲ ಅಥವಾ ಪಂಕಜ ವೀರಕುಮಾರ್ ಪಾಟೀಲ್
ಕಾಗವಾಡ: ಅರುಣ ಯಲಗುದ್ರಿ ಅಥವಾ ಡಾ ಎಸ್ ಎ ಮಗದಮ್
ತೇರದಾಳ: ಡಾ ಪದ್ಮಜಿತ್ ನಾಡಗೌಡ ಪಾಟೀಲ್ ಅಥವಾ ಪ್ರವೀಣ್ ನಾಡಗೌಡ
ಜಮಖಂಡಿ: ಸುಶೀಲ್ ಕುಮಾರ್ ಬೆಳಗಲಿ
ಹಿರಿಯೂರು: ಡಿ ಸುಧಾಕರ್
ಮೂಡುಬಿದಿರೆ: ಪದ್ಮಪ್ರಸಾದ್ ಜೈನ್
ಮಾರ್ಚ್ 21ರಂದು ಕರ್ನಾಟಕ ಜೈನ ಸಂಘದ ಅಧ್ಯಕ್ಷ ಬಿ ಪ್ರಸನ್ನಯ್ಯ ಅವರು ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಈಗಾಗಲೇ ಎರಡು ಹಂತದಲ್ಲಿ ಒಟ್ಟಯು 166 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಇವುಗಳ ಪೈಕಿ ಹಿರಿಯೂರುಗೆ ಡಿ ಸುಧಾಕರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ಇನ್ನೂ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿಲ್ಲ.
ADVERTISEMENT