ಕರ್ನಾಟಕದಲ್ಲಿ ಕಾಂಗ್ರೆಸ್ನ್ನು ಸೋಲಿಸಲು ಈ ಬಾರಿಯೂ ಬಿಜೆಪಿ ಜೊತೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ.
ಗುಜರಾತ್ ಉದ್ಯಮಿಗಳ ಜೊತೆ ಕುಮಾರಸ್ವಾಮಿ ಒಪ್ಪಂದ..?
ಅಲ್ಲದೇ ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸುವ ರಣತಂತ್ರದ ಭಾಗವಾಗಿ ಗುಜರಾತ್ ಮೂಲದ ಉದ್ಯಮಿಗಳ ಜೊತೆಗೂ ಕುಮಾರಸ್ವಾಮಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗುಜರಾತ್ ಉದ್ಯಮಿಗಳಿಂದ ಜೆಡಿಎಸ್ಗೆ ಹಣಕಾಸು ನೆರವು ..?
ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಜೆಡಿಎಸ್ಗೆ ಗುಜರಾತ್ ಮೂಲದ ಪ್ರಮುಖ ಉದ್ಯಮಿಗಳ ಹಣಕಾಸು ನೆರವು ನೀಡಲಿದ್ದಾರೆ ಎಂಬ ಒಪ್ಪಂದವನ್ನು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುಜರಾತ್ ಉದ್ಯಮಿಗಳ ಜೊತೆ ಕುಮಾರಸ್ವಾಮಿ ರಹಸ್ಯ ಭೇಟಿ..?
ಮಾಜಿ ಸಿಎಂ ಹೆಚ್ಡಿಕೆ ಮತ್ತು ಗುಜರಾತ್ ಮೂಲದ ಉದ್ಯಮಿಗಳ ಜೊತೆಗೆ ರಾಮನಗರದಲ್ಲಿ ರಹಸ್ಯ ಭೇಟಿ ನಡೆದಿದ್ದು, ಈ ರಹಸ್ಯ ಭೇಟಿಯನ್ನು ಸಚಿವ ಅಶ್ವತ್ಥ್ ನಾರಾಯಣ ಅವರು ವ್ಯವಸ್ಥೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ದೇವೇಗೌಡರ ಜೊತೆಗೆ ಬಿಜೆಪಿ ನಾಯಕನ ಸಭೆ..?
ಇದಲ್ಲದೇ ಇದೇ ಏಪ್ರಿಲ್ 5ರಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿ ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಅವರು ಮಾತುಕತೆಯನ್ನೂ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಕುಮಾರಸ್ವಾಮಿ ತೋಟದ ಮನೆಯಲ್ಲಿ ರಹಸ್ಯ ಮಾತುಕತೆ..?
ಮಾರ್ಚ್ 29ರಂದು ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಕುಮಾರಸ್ವಾಮಿ, ಕೆ ಆರ್ ನಗರ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಮತ್ತು ಸಚಿವ ಆರ್ ಅಶೋಕ್ ರಹಸ್ಯ ಸಭೆ ನಡೆಸಿದ್ದರು ಎಂದೂ ಆರೋಪಿಸಲಾಗಿದೆ.
ಜೆಡಿಎಸ್ನಿಂದ ದೂರು:
ಕಾಂಗ್ರೆಸ್ನ್ನು ಸೋಲಿಸಲು ಕರ್ನಾಟಕದಲ್ಲಿ ಜೆಡಿಎಸ್ಗೆ ಹಣಕಾಸು ವ್ಯವಸ್ಥೆ ಮಾಡುವ ಭಾಗವಾಗಿ ಕುಮಾರಸ್ವಾಮಿ ಗುಜರಾತ್ ಮೂಲದ ಉದ್ಯಮಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಇಂತಹ ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹಾಕುತ್ತಿರುವ ಟ್ವಿಟ್ಟರ್ ಹ್ಯಾಂಡಲ್ನ್ನು ಬ್ಲಾಕ್ ಮಾಡ್ಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸರಿಗೆ ಸೂಚಿಸಬೇಕು ಎಂದು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ ಪಿ ರಂಗನಾಥ್ ಅವರು ದೂರು ನೀಡಿದ್ದಾರೆ,
ADVERTISEMENT
ADVERTISEMENT