ಚುನಾವಣೆಯಲ್ಲಿ ಭಾರಿ ಬಹುಮತ ಪಡೆದ ಕಾಂಗ್ರೆಸ್ ಪಕ್ಷ ಇದೀಗ ಗದ್ದುಗೆ ಏರಲಿದೆ. ನಿಕಟಪೂರ್ವ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಹಲವು ವಿವಾದಾತ್ಮಕ ನೀತಿ, ನಿರ್ಧಾರಗಳನ್ನು ನೂತನ ಸರ್ಕಾಎ ಪರಾಮರ್ಶೆಗೆ ಒಳಪಡಿಸುವ ಸಾಧ್ಯತೆಗಳು ದಟ್ಟವಾಗಿದೆ.
ಏನಾಗಲಿದೆ ಹಿಜಬ್ ಕೇಸ್?
ಬಿಜೆಪಿ ನೇತೃತ್ವದ ಈ ಹಿಂದಿನ ಕರ್ನಾಟಕ ಸರ್ಕಾರವು ತೆಗೆದುಕೊಂಡಿದ್ದ ಹಲವು ವಿವಾದಾತ್ಮಕ ನೀತಿ-ನಿರ್ಧಾರಗಳು ಸುಪ್ರೀಂಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲ್ಪಟ್ಟಿವೆ.
ಇಂಥ ಪ್ರಕರಣಗಳ ಪಟ್ಟಿಯಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಬಾಜ್ ಧಾರಣೆ ನಿಷೇಧ ಪ್ರಮುಖವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಹಿಜಾಬ್ ಪ್ರಕರಣ ಸದ್ಯ ಸುಪ್ರೀಂಕೋರ್ಟ್ನಲ್ಲಿದೆ.
ವಿಭಾಗೀಯ ಪೀಠ ಭಿನ್ನ ನಿಲುವು ತಳೆದಿರುವುದರಿಂದ ಪ್ರಕರಣವನ್ನು ವಿಸ್ತೃತ ಪೀಠದ ಮುಂದಿಡಲು ಕೋರಲಾಗಿದೆ. ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕರ್ನಾಟಕ ಸರ್ಕಾರ ಈಗ ಯಾವ ನಿಲುವು ಕೈಗೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಮತಾಂತರ ನಿಷೇಧದ ಸುಗ್ರೀವಾಜ್ಞೆ ರದ್ದಾಗುತ್ತಾ?
ಮುಸ್ಲಿಮ್ ಮೀಸಲಾತಿ ರದ್ದು, ಮತಾಂತರ ನಿಷೇಧದ ಸುಗ್ರೀವಾಜ್ಞೆ, ಗೋಹತ್ಯೆ ನಿಷೇಧ ಕಾಯ್ದೆ, ರಮೇಶ್ ಜಾರಕಿಹೊಳಿ ಸಿ ಡಿ ಪ್ರಕರಣದಲ್ಲಿ ಎಸ್‌ಐಟಿ ರಚನೆಯ ಸಿಂಧುತ್ವದ ವಿಚಾರದಲ್ಲಿ ನೂತನ ಸರ್ಕಾರ ತೆಗದುಕೊಳ್ಳಬಹುದಾದ ನಿಲುವುಗಳು ಕುತೂಹಲ ಕೆರಳಿಸಿವೆ.
ಗೋಹತ್ಯೆ, ಮತಾಂತರ ನಿಷೇಧ ಇನ್ನಿತರ ವಿಚಾರಗಳನ್ನು ಅಧಿಕಾರಕ್ಕೆ ಬಂದಾಗ ಮರು ಪರಿಶೀಲನೆ ಮಾಡುವುದಾಗಿ ಈ ಹಿಂದೆ ಕಾಂಗ್ರೆಸ್ ಹೇಳಿತ್ತು
ಸಾಲು ಸಾಲು ಹಗರಣ.. ಸಾಲು ಸಾಲು ವಿವಾದ.. ಸಿಗುತ್ತಾ ನ್ಯಾಯ?
ಪಿಎಸ್ಐ ನೇಮಕಾತಿ ಹಗರಣ, ಕೆಎಂಎಫ್ ನೇಮಕಾತಿ ಹಗರಣ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರ, ಬಿಬಿಎಂಪಿ ಚುನಾವಣೆ, ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ನೂತನ ಸರ್ಕಾರ ಕೈಗೊಳ್ಳಬಹುದಾದ ನಿರ್ಣಯಗಳು ಕುತೂಹಲ ಮೂಡಿಸಿವೆ.