ಯಾರಾಗಬೇಕು ಸಿಎಂ..? ಜನಮತ ಸಮೀಕ್ಷೆಯಲ್ಲಿ ಯಾರಿಗೆ ಜನಾಭಿಪ್ರಾಯ..?

ಕರ್ನಾಟಕದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು..? ಜನಾಭಿಪ್ರಾಯ ಯಾರ ಕಡೆಗಿದೆ..? ಕರ್ನಾಟಕದ ಜನ ಯಾರನ್ನು ಮುಖ್ಯಮಂತ್ರಿಯನ್ನಾಗಿ ಕಾಣಲು ಬಯಸುತ್ತಿದ್ದಾರೆ..?

ನಾವು ನಡೆಸಿರುವ ಜನಮತ ಸಮೀಕ್ಷೆಯಲ್ಲಿ 9 ಸಾವಿರಕ್ಕೂ ಅಧಿಕ ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಈ 9 ಸಾವಿರ ಮಂದಿಯಲ್ಲಿ ಶೇಕಡಾ 80ರಷ್ಟು ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶೇಕಡಾ 80ರಷ್ಟು ಮಂದಿ ಸಿದ್ದರಾಮಯ್ಯ ಅವರೇ ಮತ್ತೆ ಸಿಎಂ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್​ ಸಿಎಂ ಆಗಲಿ ಎಂದು ಕೇವಲ ಶೇಕಡಾ 12 ಮಂದಿಯಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶೇಕಡಾ 3ರಷ್ಟು ಮಂದಿ ಎಂಬಿ ಪಾಟೀಲ್​ ಪರವೂ, ಶೇಕಡಾ 3ರಷ್ಟು ಮಂದಿ ಸತೀಶ್​ ಜಾರಕಿಹೊಳಿ ಪರವೂ, ಶೇಕಡಾ 3ರಷ್ಟು ಮಂದಿ ಮಲ್ಲಿಕಾರ್ಜುನ ಖರ್ಗೆ ಅವರ ಪರವೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಸಮೀಕ್ಷೆ:

ಪ್ರಜಾವಾಣಿ ನಡೆಸಿರುವ ಸಮೀಕ್ಷೆಯಲ್ಲಿ 32 ಸಾವಿರ ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇವರಲ್ಲಿ ಶೇಕಡಾ 68ರಷ್ಟು ಮಂದಿ ಸಿದ್ದರಾಮಯ್ಯ ಅವರೇ ಮತ್ತೆ ಸಿಎಂ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶೇಕಡಾ 19ರಷ್ಟು ಮಂದಿ ಡಿಕೆಶಿವಕುಮಾರ್​ ಅವರ ಪರವೂ, ಶೇಕಡಾ 5ರಷ್ಟು ಮಂದಿ ಡಾ ಜಿ ಪರಮೇಶ್ವರ್​ ಅವರ ಪರವೂ, ಶೇಕಡಾ 4ರಷ್ಟು ಮಂದಿ ಎಂ ಬಿ ಪಾಟೀಲ್​ ಪರವೂ, ಶೇಕಡಾ 3ರಷ್ಟು ಮಂದಿ ಇತರೆ ಯಾರಾದರೂ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿವಿ9 ಸಮೀಕ್ಷೆ:

ಟಿವಿ9 ಕನ್ನಡ ನಡೆಸಿರುವ ತನ್ನ ಅನ್​ಲೈನ್​ ಸಮೀಕ್ಷೆಯಲ್ಲಿ 3 ಲಕ್ಷದ 15 ಸಾವಿರಕ್ಕೂ ಅಧಿಕ ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇವರಲ್ಲಿ ಶೇಕಡಾ 74 ಮಂದಿ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇವಲ ಶೇಕಡಾ 26 ಮಂದಿಯಷ್ಟೇ ಡಿಕೆಶಿವಕುಮಾರ್​ ಮುಖ್ಯಮಂತ್ರಿ ಆಗಲಿ ಎಂದು ಬಯಸಿದ್ದಾರೆ.