Jharkhand : ‘ಅಪರೇಷನ್ ಕಮಲ’ ಭಯ – ಶಾಸಕರ ಸ್ಥಳಾಂತರಕ್ಕೆ ಕಾಂಗ್ರೆಸ್,ಜೆಎಮ್​ಎಮ್​ ನಿರ್ಧಾರ

Operation Lotus

ಜಾರ್ಖಾಂಡನಲ್ಲಿ ಇಂದು ದೊಡ್ಡ ರಾಜಕೀಯ ವಿದ್ಯಮಾನ ನಡೆಯುವ ಮುನ್ಸೂಚನೆ ಕಂಡುಬರುತ್ತಿದೆ. ಇತ್ತೀಚೆನ ಬೆಳವಣಿಗೆಯಲ್ಲಿ ಬಿಜೆಪಿಯ ‘ಅಪರೇಷನ್ ಕಮಲ’ (Operation Lotus) ಭಯದಿಂದ ಕಾಂಗ್ರೆಸ್​ ಹಾಗೂ ಜೆಎಮ್​ಎಮ್​ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್​ಗೆ ಸ್ಥಳಾಂತರಿಸಲು ನಿರ್ಧರಿಸಿವೆ.

ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೋರೇನ್ ಅವರ ಶಾಸಕತ್ವ ಸ್ಥಾನ ರದ್ದು ಮಾಡಿ ಕೇಂದ್ರ ಚುನಾವಣಾ ಆಯೋಗ ರಾಜ್ಯಪಾಲರಿಗೆ ವರದಿ ನೀಡಿದೆ ಎಂದು ಹೇಳಲಾಗಿದೆ. ಇಂದು ರಾಜ್ಯಪಾಲರಾದ ರಮೇಶ್ ಬೈಸ್ ಈ ವರದಿಯನ್ನು ಸ್ವೀಕರಿಸಿ ಅಂಗೀಕರಿಸುವ ಸಾಧ್ಯತೆ ಇದೆ. ರಾಜ್ಯಪಾಲರು ಈ ವರದಿಗೆ ಅಂಕಿತ ಹಾಕಿದರೆ ಮುಖ್ಯಮಂತ್ರಿ ಹೇಮಂತ್ ಸೋರೆನ್​ರ ಖುರ್ಚಿಗೆ ಕುತ್ತು ಬರಲಿದೆ.

ಇದನ್ನೂ ಓದಿ : BIG BREAKING: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಶಾಸಕತ್ವ ರದ್ದು – CM ಸ್ಥಾನಕ್ಕೆ ರಾಜೀನಾಮೆ ಅನಿವಾರ್ಯ

ಈ ಹಿನ್ನೆಲೆಯಲ್ಲಿ ಜಾರ್ಖಾಂಡ್ ಮುಕ್ತಿ ಮೋರ್ಚಾ (ಜೆಎಮ್​ಎಮ್​) ಪಕ್ಷದ ನಾಯಕ ಹಾಗೂ ಮುಕ್ಯಮಂತ್ರಿ ಹಾಗೂ ಕಾಂಗ್ರೆಸ್​​ ಪಕ್ಷದ ನಾಯಕ ಸಭೆ ನಡೆಸಿದ್ದಾರೆ. ಅಪರೇಷನ್ ಕಮಲದ ಭಯ ಇರುವುದರಿಂದ (Operation Lotus) ಈ ಸಭೆಯಲ್ಲಿ ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಶಾಸಕರನ್ನು ರೆಸಾರ್ಟ್​ಗೆ ಕಳುಹಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here