ಖಡಕ್ ಆಗಿದೆ ಅಂಬಿ ಪುತ್ರನ ‘AA04’ ಚಿತ್ರದ ಫಸ್ಟ್ ಲುಕ್

Abhishek Ambareesh

ಸಂಸದೆ ಸುಮಲತಾ ಅಂಬರೀಶ್​ರ ಹುಟ್ಟುಹಬ್ಬದ ಪ್ರಯುಕ್ತ ಇಂದು ಅಭಿಷೇಕ್ ಅಂಬರೀಷ್​ ನಟನೆಯ AA04 ಚಿತ್ರದ (AA04 Film) ಫಸ್ಟ್​ ಲುಕ್ ಬಿಡುಗಡೆಯಾಗಿದೆ.

ಅಂಬಿ ಪುತ್ರ ಅಭಿಯವರ AA04 ಚಿತ್ರದ (AA04 Film) ಫಸ್ಟ್​ ಪೋಸ್ಟರ್​​​ ಅಧ್ಭುತವಾಗಿ ಮೂಡಿಬಂದಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

AA04

ಇಂದು ಕಂಠೀರವ ಸ್ಟುಡಿಯೋದಲ್ಲಿ ಅಭಿಯವರ ನೂತನ ಚಿತ್ರದ ಪೋಸ್ಟರ್​ನ್ನು ಸುಮಲತಾ ಅವರು ಬಿಡುಗಡೆ ಮಾಡಿದರು.

AA04 ಚಿತ್ರವನ್ನು ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ. ‘ಮದಗಜ’ ಖ್ಯಾತಿಯ ಮಹೇಶ್ ಕುಮಾರ್​​​ ಚಿತ್ರದ ನಿರ್ದೇಶನ ಮಾಡಲಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿರಲಿದೆ. ಚಿತ್ರದ ತಾರಾಗಣ ಇನ್ನಷ್ಟೇ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here