ಜೆಪಿ ನಡ್ಡಾ ಭೇಟಿ ಮಾಡಿದ ಮಿಥಾಲಿ ರಾಜ್ : ಬಿಜೆಪಿ ಸೇರ್ಪಡೆ ಸಾಧ್ಯತೆ

Mithali Raj

ಮಾಜಿ ಕ್ರಿಕೇಟ್ ಆಟಗಾರ್ತಿ ಮಿಥಾಲಿ ರಾಜ್ (Mithali Raj)​ ಇಂದು ಹೈದ್ರಾಬಾದ್​ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಬೇಟಿಯಾಗಿದ್ದಾರೆ. ಈ ಭೇಟಿಯ ಹಿನ್ನೆಲೆಯಲ್ಲಿ ಮಿಥಾಲಿ ರಾಜ್​ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇಂದು ಶನಿವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೈದ್ರಾಬಾದ್​​ಗೆ ಬಂದಿದ್ದಾರೆ. ಈ ವೇಳೆ ಬಿಜೆಪಿ ಕಚೇರಿಗೆ ಹೋಗಿರುವ ಮಿಥಾಲಿ ರಾಜ್​ ಅವರನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಜೆಪಿಯ ನೆಲೆ ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಹರಸಾಹಸ ಪಡುತ್ತಿದೆ. ಕಳೆದ 1 ವರ್ಷದಿಂದೀಚೆಗೆ ತೆಲಂಗಾಣದಲ್ಲಿಯೇ ಕೇಂದ್ರ ಬಿಜೆಪಿ ಹೈಕಮಾಂಡ್ ತಮ್ಮ ಗಮನ ಹರಿಸಿದೆ. ಇತ್ತೀಚೆಗೆ, ದಕ್ಷಿಣ ಭಾರತದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನೂ ಹೈದ್ರಾಬಾದ್​ನಲ್ಲಿ ಮಾಡಿತ್ತು.

ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್​ಗೆ ಆಟಗಾರ್ತಿ ‘ಮಿಥಾಲಿ ರಾಜ್’ ನಿವೃತ್ತಿ ಘೋಷಣೆ

ತಮ್ಮ ನೆಲೆ ವಿಸ್ತರಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಖ್ಯಾತ​​ ಕ್ರಿಕೇಟ್ ಆಟಗಾರ್ತಿ ಮಿಥಾಲಿ ರಾಜ್​ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಜೆಪಿ ನಡ್ಡಾ ಮತ್ತು ಮಿಥಾಲಿ ರಾಜ್​ ನಡುವೆ ಅಧಿಕೃತವಾಗಿ ಮಾತುಕತೆ ನಡೆದಿದೆ. ಮಿಥಾಲಿ ರಾಜ್​ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಆಟಗಾರ್ತಿ ಮಿಥಾಲಿ ರಾಜ್ (Mithali Raj)​ ​ ಭಾರತೀಯ ಮಹಿಳಾ ಕ್ರಿಕೇಟ್ ತಂಡದ ನಾಯಕಿಯಾಗಿದ್ದರು. ತಮ್ಮ ನಾಯಕತ್ವ ಹಾಗೂ ಬ್ಯಾಟಿಂಗ್​ನಿಂದಾಗಿ ಸಾಕಷ್ಟು ಖ್ಯಾತಿಗಳಿಸಿದ್ದಾರೆ. ಇದೇ ವರ್ಷದ ಜೂನ್ 8 ರಂದು ಮಹಿಳಾ ಕ್ರಿಕೆಟ್ ತಂಡದ ನಾಯಕತ್ವ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ : ವಿಶ್ವಕಪ್​ನಲ್ಲಿ ವಿಶ್ವದಾಖಲೆ : ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ‘ಮಿಥಾಲಿ ರಾಜ್’

LEAVE A REPLY

Please enter your comment!
Please enter your name here