2022 INDvPak Live Streaming : ಯಾವಾಗ ಮತ್ತು ಹೇಗೆ ಪಂದ್ಯ ವೀಕ್ಷಿಸಬಹುದು – ಇಲ್ಲಿದೆ ಡೀಟೇಲ್ಸ್

INDvPAK Live Streaming

ಇಂದು ಶನಿವಾರ ಏಷ್ಯಾ ಕಪ್ (Asia Cup 2022)ಗೆ ಅದ್ದೂರಿ ಚಾಲನೆ ದೊರಕಿದೆ. ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ  ನಡುವೆ (INDvPAK Live Streaming) 2 ನೇ ಪಂದ್ಯ ನಡೆಯಲಿದ್ದು, ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

ಇಂದು ಶನಿವಾರದ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಭಾನುವಾರ ಭಾರತ, ಪಾಕಿಸ್ತಾನದ ಪಂದ್ಯ (INDvPAK Live Streaming) ನಡೆಯಲಿದೆ. ಕಳೆದ ವರ್ಷ ನಡೆದಿದ್ದ ಟಿ-20 ವಿಶ್ವಕಪ್​ನಲ್ಲಿನ ಪಾಕಿಸ್ತಾನದ ವಿರುದ್ಧ ಸೋತಿದ್ದ ಭಾರತ ತಂಡ ಸೇಡು ತೀರಿಸಿಕೊಳ್ಳುತ್ತಾ ಎಂಬ ಕುತೂಹಲ ಗರಿಗೆದರಿದೆ.

INDvPAK ಯಾವಾಗ ನಡೆಯಲಿದೆ.?

ಭಾನುವಾರ ಅಗಸ್ಟ್​​ 28 ರಂದು ಸಂಜೆ 7:30 ಕ್ಕೆ (ಬಾರತೀಯ ಕಾಲಮಾನದ ಪ್ರಕಾರ) ಪಂದ್ಯದ ನೇರ ಪ್ರಸಾರ ಆರಂಭವಾಗಲಿದೆ. 7 ಗಂಟೆಗೆ ಟಾಸ್​ ಆಗಲಿದೆ.

ಇದನ್ನೂ ಓದಿ : INDvPAK : ಸೇಡು ತೀರಿಸಿಕೊಳ್ಳುತ್ತಾ ಭಾರತ – ಎರಡೂ ತಂಡಗಳ ಬಲಾಬಲದ ವಿವರ

INDvPAK ಎಲ್ಲಿ ನಡೆಯಲಿದೆ.?

Asia Cup 2022 INDvPak ಪಂದ್ಯ ದುಬೈನ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

INDvPAK ಪಂದ್ಯವನ್ನು ಯಾವ ಟಿವಿಗಳಲ್ಲಿ ವೀಕ್ಷಿಸಬಹುದು..? 

Asia Cup 2022 INDvPak ಪಂದ್ಯಗಳ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ 1 (Star Sports 1), ಸ್ಟಾರ್ ಸ್ಪೋರ್ಟ್ಸ್ 3 (Star Sports 3) ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ ಹೆಚ್​​ಡಿ (Star Sports Select HD) ಚಾನೆಲ್​ಗಳಲ್ಲಿ ವೀಕ್ಷಿಸಬಹುದಾಗಿದೆ.

INDvPAK ಪಂದ್ಯವನ್ನು ಆನ್​ಲೈನ್​ನಲ್ಲಿ ಹೇಗೇ ವೀಕ್ಷಿಸಬಹುದು..? 

Asia Cup 2022 INDvPAK ಪಂದ್ಯಗಳ ಆನ್​ಲೈನ್ ನೇರ ಪ್ರಸಾರವನ್ನು ಹಾಟ್​​ಸ್ಟಾರ್​ (Hotstar) ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Asia Cup 2022 : ಏಷ್ಯಾ ಕಪ್​ಗೆ ಅದ್ದೂರಿ ಚಾಲನೆ : ಅಫ್ಘನ್ – ಲಂಕಾ ಮುಖಾಮುಖಿ

LEAVE A REPLY

Please enter your comment!
Please enter your name here