Asia Cup 2022 : ಏಷ್ಯಾ ಕಪ್​ಗೆ ಅದ್ದೂರಿ ಚಾಲನೆ : ಅಫ್ಘನ್ – ಲಂಕಾ ಮುಖಾಮುಖಿ

Asia Cup 2022
ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ (Asia Cup 2022) ಇಂದು ಚಾಲನೆ ಸಿಗಲಿದೆ . ಈ ಬಾರಿ ಐಸಿಸಿ ಟಿ 20 ವಿಶ್ವಕಪ್ ಇರುವ ಕಾರಣ ಏಷ್ಯಾಕಪ್ ಕೂಡ ಏಕದಿನದ ಬದಲು ಟಿ 20 ಮಾದರಿಯಲ್ಲಿ ನಡೆಯಲಿದೆ. 38 ವರ್ಷಗಳ ಇತಿಹಾಸ ಹೊಂದಿರುವ ಏಷ್ಯಾಕಪ್ ಟೂರ್ನಿಯಲ್ಲಿ ಏಷ್ಯಾದ ಅಗ್ರ ಆರು ತಂಡಗಳು ಸೆಣೆಸಾಟ ನಡೆಸಲಿದೆ.
ಇದನ್ನೂ ಓದಿ : Asia Cup 2022 : ಮಧ್ಯಂತರ ಕೋಚ್​​ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ
ಈ ಬಾರಿ ಒಂದು ಟ್ರೋಫಿಗಾಗಿ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ ಹಾಗೂ ಹಾಂಕಾಂಗ್ ಸ್ಥಾನ ಪಡೆದುಕೊಂಡಿದ್ದರೆ, ಗ್ರೂಪ್ ಬಿ ಯಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಇದೆ. ದುಬೈ ಮತ್ತು ಶಾರ್ಜಾದಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ಒಟ್ಟು 13 ಪಂದ್ಯಗಳು ನಡೆಲಿವೆ.
2018 ರ ಕೋವಿಡ್-19 ಕಾರಣದಿಂದಾಗಿ ಯುಎಇಯಲ್ಲಿ ಕೊನೆಯದಾಗಿ ನಡೆದ ಏಷ್ಯಾಕಪ್ ಟೂರ್ನಿ (Asia Cup 2022) ನಂತರ 2020 ರಿಂದ 2022 ಕ್ಕೆ ಮುಂದೂಡಲಾಯಿತು. ಮೊದಲಿಗೆ ಈ ಬಾರಿಯ ಏಷ್ಯಾಕಪ್ ಶ್ರೀಲಂಕಾದಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ, ದ್ವೀಪ ರಾಷ್ಟ್ರದಲ್ಲಿ ಅಗಾಧವಾದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಬಿಕ್ಕಟ್ಟಿನ ಕಾರಣ ಏಷ್ಯಾಕಪ್ ಅನ್ನು ಲಂಕಾದಿಂದ ಯುಎಇಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ : ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಶ್ರೀಲಂಕಾದಿಂದ ಸ್ಥಳಾಂತರ – ದಿನಾಂಕವೂ ನಿಗದಿ
ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ–ಅಫ್ಘಾನ್ ಮುಖಾಮುಖಿ :
ಇಂದು ಏಷ್ಯಾಕಪ್​ನ ಉದ್ಘಾಟನಾ ಪಂದ್ಯದಲ್ಲಿ ಗ್ರೂಪ್ ಬಿ ಯಲ್ಲಿರುವ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಸೆಣೆಸಾಟ ನಡೆಸಲಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30 ಕ್ಕೆ ಶುರುವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.
ಏಷ್ಯಾ ಕಪ್​ 2022ರ ಸಂಪೂರ್ಣ ವೇಳಾಪಟ್ಟಿ :
ಶ್ರೀಲಂಕಾ vs ಅಫ್ಘಾನಿಸ್ತಾನ – ಆಗಸ್ಟ್ 27, ದುಬೈ
ಭಾರತ vs ಪಾಕಿಸ್ತಾನ – ಆಗಸ್ಟ್ 28, ದುಬೈ
ಬಾಂಗ್ಲಾದೇಶ vs ಅಫ್ಘಾನಿಸ್ತಾನ – ಆಗಸ್ಟ್ 30, ಶಾರ್ಜಾ
ಭಾರತ vs ಹಾಂಕಾಂಗ್​ – ಆಗಸ್ಟ್ 31, ದುಬೈ
ಶ್ರೀಲಂಕಾ vs ಬಾಂಗ್ಲಾದೇಶ – ಸೆಪ್ಟೆಂಬರ್ 1, ದುಬೈ
ಪಾಕಿಸ್ತಾನ vs ಹಾಂಕಾಂಗ್​– ಸೆಪ್ಟೆಂಬರ್ 2, ಶಾರ್ಜಾ
ಗ್ರೂಪ್​ ಎ ಮತ್ತು ಬಿ ಯಲ್ಲಿ ತಲಾ ಎರಡು ತಂಡಗಳು ಸೂಪರ್​-4ಗೆ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ : ಐಸಿಸಿ ಟಿ-20 ವಿಶ್ವಕಪ್ ಗುಂಪುಗಳ ಪ್ರಕಟ: ಭಾರತ, ಪಾಕಿಸ್ತಾನ ಒಂದೇ ಗುಂಪಿನಲ್ಲಿ
ಸೂಪರ್– 4ರ ವೇಳಾಪಟ್ಟಿ ಇಂತಿದೆ :
B1 vs B2 – ಸೆಪ್ಟೆಂಬರ್ 3, ಶಾರ್ಜಾ
A1 vs A2 – ಸೆಪ್ಟೆಂಬರ್ 4, ದುಬೈ
A1 vs B1 – ಸೆಪ್ಟೆಂಬರ್ 6, ದುಬೈ
A2 vs B2 – ಸೆಪ್ಟೆಂಬರ್ 7, ದುಬೈ
A1 vs B2 – ಸೆಪ್ಟೆಂಬರ್ 8, ದುಬೈ
B1 vs A2 – ಸೆಪ್ಟೆಂಬರ್ 9, ದುಬೈ
ಫೈನಲ್ ಪಂದ್ಯ – ಸೆಪ್ಟೆಂಬರ್ 11, ದುಬೈ
ಭಾನುವಾರ ಭಾರತ ಮತ್ತು ಪಾಕಿಸ್ತಾನದ ಮೊದಲ ಪಂದ್ಯ ನಡೆಯಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಹಲವು ವರ್ಷಗಳ ನಂತರ ಭಾರತ ಹಾಗೂ ಶ್ರೀಲಂಕಾದ ಕ್ರಿಕೇಟ್ ತಂಡಗಳು ಮುಖಾಮುಖಿಯಾಗಲಿವೆ.

ಚಪ್ಪಲಿ ಬಿಟ್ಟು ಅಪ್ಪುಗೆ ತಲೆ ಬಾಗಿ ನಮಸ್ಕರಿಸಿದ ರಘು..!

LEAVE A REPLY

Please enter your comment!
Please enter your name here