16ನೇ ಆವೃತ್ತಿಯ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದೆ. ಮಧ್ಯರಾತ್ರಿ 12.10ಕ್ಕೆ ಶುರುವಾದ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ನ್ನು ಅವರದ್ದೇ ತವರು ಕ್ರೀಡಾಂಗಣ ಅಹಮದಾಬಾದ್ನಲ್ಲಿ ಧೋನಿ ಬಳಗ 5 ವಿಕೆಟ್ಗಳಿಂದ ಸೋಲಿಸಿದೆ.
ಈ ಮೂಲಕ ಐದನೇ ಬಾರಿಗೆ ಚೆನ್ನೈ ಐದನೇ ಬಾರಿಗೆ ಐಪಿಎಲ್ ಗೆದ್ದಿದೆ. ಈಗಾಗಲೇ ಐದು ಬಾರಿ ಐಪಿಎಲ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಜೊತೆಗೆ ಸಮಬಲ ಸಾಧಿಸಿದೆ.
ಐಪಿಎಲ್ ಗೆದ್ದ ಚೆನ್ನೈಗೆ ಎಷ್ಟು ಹಣ ಸಿಗುತ್ತದೆ..? ಸೋತ ಗುಜರಾತ್ ಟೈಟಾನ್ಸ್ಗೆ ಎಷ್ಟು ದುಡ್ಡು ಸಿಗುತ್ತದೆ ಎಂಬ ಲೆಕ್ಕಚಾರ ಇಲ್ಲಿದೆ.
ಐಪಿಎಲ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 20 ಕೋಟಿ ರೂಪಾಯಿ ಮೊತ್ತದ ಪ್ರಶಸ್ತಿ ಹಣ ಸಿಕ್ಕಿದೆ.
ಅಂತಿಮ ಪಂದ್ಯದಲ್ಲಿ ಸೋತ ಗುಜರಾತ್ ಟೈಟಾನ್ಸ್ಗೆ 12.5 ಕೋಟಿ ರೂಪಾಯಿ ಮೊತ್ತದ ಹಣ ಸಿಕ್ಕಿದೆ.
ಆರೆಂಜ್ ಕ್ಯಾಪ್:
ಈ ಬಾರಿ ಆರೆಂಜ್ ಕ್ಯಾಪ್ ಮುಂಬೈ ಇಂಡಿಯನ್ಸ್ ಆಟಗಾರ ಶುಭ್ಮನ್ ಗಿಲ್ ಅವರ ಪಾಲಾಗಿದೆ. ಸರಣಿಯಲ್ಲಿ ಅತ್ಯಧಿಕ 890 ರನ್ ಗಳಿಸಿರುವ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
ಪರ್ಪಲ್ ಕ್ಯಾಪ್:
ಸರಣಿಯಲ್ಲಿ ಅತೀ ಹೆಚ್ಚು ಅಂದರೆ 28 ವಿಕೆಟ್ ಪಡೆದ ಮೊಹಮ್ಮದರ್ ಸಿರಾಜ್ ಅವರಿಗೆ ಪರ್ಪಲ್ ಕ್ಯಾಪ್ ಸಿಕ್ಕಿದೆ. ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
ಎರ್ಮಜಿಂಗ್ ಪ್ಲೇಯರ್ ಆಫ್ ದಿ ಇಯರ್:
ಈ ಗೌರವ ಈ ಬಾರಿ ಯಶಸ್ವಿ ಜೈಸ್ವಾಲ್ ಅವರಿಗೆ ನೀಡಲಾಗಿದೆ. ಬಹುಮಾನದ ಮೊತ್ತ 10 ಲಕ್ಷ ರೂಪಾಯಿ.
ಸೂಪರ್ ಸ್ಟ್ರೈಕರ್ ಆಫ್ ದಿ ಇಯರ್:
ಗ್ಲೆನ್ ಮ್ಯಾಕ್ಸ್ವೆಲ್ ಅವರು ಈ ಬಾರಿ ಸರಣಿಯಲ್ಲಿ 183.48 ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದರು. ಅವರಿಗೆ 10 ರೂಪಾಯಿ ಬಹುಮಾನ ನೀಡಲಾಗಿದೆ.
ಅತೀ ಮೌಲ್ಯ ಭರಿತ ಆಟಗಾರ:
ಮುಂಬೈ ಇಂಡಿಯನ್ಸ್ ತಂಡ ಶುಭ್ಮನ್ ಗಿಲ್ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
ಗೇಮ್ಸ್ ಚೇಂಜರ್ ಆಫ್ ದಿ ಇಯರ್:
ಶುಭ್ಮನ್ ಗಿಲ್ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.
ಸರಣಿಯಲ್ಲಿ ಅತೀ ಹೆಚ್ಚು ಬೌಂಡರಿ ಬಾರಿಸಿದವರು:
85 ಬೌಂಡರಿಗಳನ್ನು ಬಾರಿಸಿದ ಶುಭ್ಮನ್ ಗಿಲ್ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.
ಅತೀ ದೂರದ ಸಿಕ್ಸ್:
115 ಮೀಟರ್ ದೂರಕ್ಕೆ ಸಿಕ್ಸರ್ ಚಚ್ಚಿದ ಡುಪ್ಲೇಸಿಸ್ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.
ಬೆಸ್ಟ್ ಪಿಚ್ ಮತ್ತು ಅತ್ಯುತ್ತಮ ಗ್ರೌಂಡ್:
ಕೋಲ್ಕತ್ತಾದ ಈಡನ್ ಗಾರ್ಡನ್ ಮತ್ತು ಮುಂಬೈ ವಾಂಖೆಡೆ ಸ್ಟೇಡಿಯಂಗೆ 50 ಲಕ್ಷ ರೂಪಾಯಿ ನೀಡಲಾಗಿದೆ.
ADVERTISEMENT
ADVERTISEMENT