ADVERTISEMENT
ಹೊಸ ಸಂಸತ್ ಭವನದ ಉದ್ಘಾಟನೆ ಸಂದರ್ಭದಲ್ಲಿ ಎಲ್ಲರನ್ನು ಆಕರ್ಷಿಸಿದ್ದು ಸೆಂಗೋಲ್ ಮತ್ತು ತಮಿಳುನಾಡಿನ 19 ಮಠಗಳಿಗೆ ಸೇರಿದ ಮಠಾಧಿಪತಿಗಳು..
ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿಯೇ ಈ ಮಠಾಧಿಪತಿಗಳನ್ನು ಪ್ರತ್ಯೇಕ ವಿಮಾನದಲ್ಲಿ ಮೂರು ದಿನಗಳ ಮೊದಲೇ ಕೇಂದ್ರ ಸರ್ಕಾರ ದೆಹಲಿಗೆ ಕರೆತಂದಿತ್ತು.
ದೆಹಲಿಯ ಟಾಪ್ ಹೋಟೆಲ್‌ಗಳ ಪೈಕಿ ಒಂದರಲ್ಲಿ ಐಶಾರಾಮಿ ವಸತಿ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಕಲ್ಪಿಸಿತ್ತು.
ಮಠಾಧಿಪತಿಗಳಿಗೆ ಸಾತ್ವಿಕ ಆಹಾರವನ್ನು ಒದಗಿಸಿತ್ತು. ಈರುಳ್ಳಿ, ಬೆಳ್ಳುಳ್ಳಿ, ಮಸಾಲೆ ಇಲ್ಲದ ಆಹಾರ ಪದಾರ್ಥಗಳ ಅಡುಗೆ ಮಾಡಲು ವಿಶೇಷ ಅಡುಗೆ ಭಟ್ಟರನ್ನು ನಿಯಮಿಸಲಾಗಿತ್ತು.
ಪ್ರತಿ ಹೊತ್ತು ಎಲ್ಲಾ ಮಠಾಧಿಪತಿಗಳನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ಅವರಿಗೆ ಏನು ಬೇಕು ಎಂಬುದನ್ನು ತಿಳಿದು ಅವರಿಗೆ ಬೇಕಾದ ಆಹಾರವನ್ನು ತಯಾರಿಸಿ ನೀಡಲಾಗಿತ್ತು.
ಮಠಾಧಿಪತಿಗಳಿಗೆ ನೆರವಾಗಲು ಸಂಸ್ಕೃತಿ ಇಲಾಖೆ ತಮಿಳು ಮಾತನಾಡುವ ಇಬ್ಬರು ಅಧಿಕಾರಿಗಳನ್ನು ಪ್ರತ್ಯೇಕವಾಗಿ ನಿಯೋಜನೆ ಮಾಡಿತ್ತು.
ಧರ್ಮಪುರಿ ಮಠದ ಸ್ವಾಮೀಜಿಗಳು ಶತಶತಮಾನಗಳಿಂದ ಸೂರ್ಯಾಸ್ತಕ್ಕೆ ಮುನ್ನ ಪೂಜೆ ಮಾಡುವುದು ವಾಡಿಕೆ.. ಇಂತಹ ಆಚಾರಗಳಿಗೆ, ಸಂಪ್ರದಾಯಗಳಿಗೆ ಧಕ್ಕೆ ಬಾರದಂತೆ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿತ್ತು.
19 ಮಠಾಧಿಪತಿಗಳ ಪೈಕಿ ಆರು ಮಂದಿ ಪ್ರಧಾನಿ ನರೇಂದ್ರ ಮೋದಿಗೆ ರಾಜದಂಡವನ್ನು ಹಸ್ತಾಂತರಿಸಿದ್ದರು.
ADVERTISEMENT