ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ : ಕೊನೆಗೂ ಕತ್ತಲಿನಿಂದ ಹೊರಬಂದ ‘ಉಪರ್​ರ್ಬೇಡಾ’ ಗ್ರಾಮ

ಬಿಜೆಪಿ ನೇತೃತ್ವದ ಎನ್​ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಗ್ರಾಮ ಉಪರ್​ಬೇಡಾಗೆ ಒಡಿಶಾ ಸರ್ಕಾರ ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಆರಂಭಿಸಿದೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆ ಮೂಲಕ ಅವರ ಸ್ವಂತ ಗ್ರಾಮ ಕೊನೆಗೂ ಕತ್ತಲಿನಿಂದ ಹೊರಬಂದಿದ್ದು, ಬೆಳಕು ಕಂಡಿದೆ.

ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಮರುದಿನ ಒಡಿಶಾ ಸರ್ಕಾರ ಮಯೂರ್​ಬಂಜ್​ ಜಿಲ್ಲೆಯ ಉಪರ್​ಬೇಡಾ ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವ ಕೆಲಸ ಆರಂಭಿಸಿದೆ. ಸ್ವತಂತ್ರ ಬಂದ ನಂತರ ಇದುವರೆಗೂ ಕತ್ತಲಲ್ಲಿದ್ದ ಗ್ರಾಮ ಇದೀಗ ಬೆಳಕು ಕಂಡಿದೆ.

ದ್ರೌಪದಿ ಮುರ್ಮು ಅವರು ಪ್ರಸ್ತುತ ಈ ಗ್ರಾಮದಲ್ಲಿ ವಾಸಮಾಡುತ್ತಿಲ್ಲ. ಉಪರ್​ಬೇಡಾದಿಂದ 20 ಕಿ.ಮೀಟರ್ ದೂರದಲ್ಲಿರುವ ಮುನ್ಸಿಪಲ್ ನಗರ ರೈರಾಂಗ್​ಪುರಕ್ಕೆ ತೆರಳಿ ವಾಸಮಾಡುತ್ತಿದ್ದಾರೆ. ದ್ರೌಪದಿ ಮುರ್ಮು ಅವರು ಒಡಿಶಾ ವಿಧಾನಸಭೆಯಲ್ಲಿ ಸಚಿವರಾಗಿ, ಬಿಜೆಪಿ ರಾಷ್ಟ್ರೀಯ ಎಸ್​ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಹಾಗೂ ಜಾರ್ಖಾಂಡ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಆದಾಗ್ಯೂ ಇವರು ತಮ್ಮ ಸ್ವಂತ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರಲಿಲ್ಲ.

ಉಪರ್​ಬೇಟಾ ಗ್ರಾಮಕ್ಕೆ ಮುಂದಿನ 24 ಗಂಟೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

ಈ ಗ್ರಾಮವು 3,500 ಜನರನ್ನು ಒಳಗೊಂಡಿದೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಪತ್ರಕರ್ತರು ಅವರ ಗ್ರಾಮಕ್ಕೆ  ಬೇಟಿ ನೀಡಿದಾಗ ಉಪರ್​ಬೇಡಾ ಕತ್ತಲಲ್ಲಿರುವ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಈ ಗ್ರಾಮಕ್ಕೆ ವಿದ್ಯುತ್ ನೀಡಬಾರದು ಎಂಬ ಉದ್ದೇಶವಿರಲಿಲ್ಲ. ಅದರೆ, ವಿವಿಧ ಕಾರಣಗಳಿಂದ ಅನುಮತಿ ದೊರಕಿರಲಿಲ್ಲ ಎಂದು ಹೇಳಿದ್ದಾರೆ.

ಹಬ್ಬ ಹರಿದಿನಗಳಲ್ಲಿ ಮುರ್ಮು ಗ್ರಾಮಕ್ಕೆ ಭೇಟಿ ನೀಡಿದಾಗ ಅವರ ಗಮನಕ್ಕೆ ತರಲಾಗಿತ್ತು. ಅಲ್ಲದೇ, 2019 ರ ಚುನಾವಣೆಯ ಸಮಯದಲ್ಲಿ ಸ್ಥಳೀಯ ಶಾಸಕ ಮತ್ತು ಸಂಸದರಿಗೆ ವಿಷಯ ತಿಳಿಸಲಾಗಿದೆ. ಆದಾಗ್ಯೂ ಯಾವ ಕೆಲಸವೂ ಆಗಿಲ್ಲ ಎಂದು ಉಪರಬೇಡ ಗ್ರಾಮದ ನಿವಾಸಿ ಚಿತ್ತರಂಜನ್ ಬಸ್ಕೆ ಹೇಳಿದ್ದಾರೆ.

ಉಪರ್​ರ್ಬೇಡಾ ಗ್ರಾಮಸ್ಥರು ಇದುವರೆಗೂ ಸೀಮೆಎಣ್ಣೆ ದೀಪದಿಂದಲೇ ಪೂರ್ತಿ ರಾತ್ರಿಯನ್ನು ಕಳೆಯುತ್ತಿದ್ದರು.

ಉಪರ್​​ರ್ಬೇಡಾ ಗ್ರಾಮದಲ್ಲಿ ಒಡಿಶಾ ಸಂಸದರಾದ ಸಲ್ಕಾಮ್ ಮುರ್ಮು, ಭಬೇಂದ್ರ ಮಜೀ ಮತ್ತು ಮಾಜಿ ಮಂತ್ರಿ ಕಾರ್ತಿಕ್ ಮಜೀ ಇವರು ಇದೇ ಗ್ರಾಮದಲ್ಲಿ ಜನಿಸಿದ್ದಾರೆ. ಒಡಿಶಾದ ಮಯೂರ್​ಬಂಜ್​ ಜಿಲ್ಲೆಯಲ್ಲಿ ಇದುವರೆಗೂ 500 ಗ್ರಾಮಗಳಿಗೆ ಸರಿಯಾದ ರಸ್ತೆಗಳಿಲ್ಲ, 1350 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here